

ರಾಮನಗರ: ಬೆಂಗಳೂರು-ಮೈಸೂರು ಧಶಪಥ ಎಕ್ಸ್ಪ್ರೆಸ್ವೇ ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಬಳಿ ನಡೆದಿದ್ದ ಸಿಬ್ಬಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬೆಂಗಳೂರು ಸುಂಕದಕಟ್ಟೆ ಮೂಲದ ಅಭಿಷೇಕ್(29, ಸಂತೋಷ್(23) ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಿಬ್ಬರು ಫುಡ್ ಡೆಲವರಿ ಬಾಯ್ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜೂನ್ 4ರಂದು ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಆರೋಪಿಗಳು ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಹಣ ಕೊಡುವ ವಿಚಾರಕ್ಕೆ ಸಿಬ್ಬಂದಿ ಪವನ್ ನಾಯಕ್(26) ಜೊತೆ ಜಗಳ ತೆಗೆದಿದ್ದಾರೆ.
ಈ ವೇಳೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಹೊಡೆದಾಡ ನಡೆದಿದೆ. ಇದನ್ನೇ ಗುರಿಯಾಗಿಸಿಕೊಂಡ ಯುವಕರು ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದ ಪವನ್ ಹಾಗೂ ಮಂಜುನಾಥ್ ಎಂಬುವವರ ಮೇಲೆ ಆರೋಪಿಗಳಾದ ಅಭಿಷೇಕ್ ಹಾಗೂ ಸಂತೋಷ್ ಹಾಕಿ ಸ್ಟಿಕ್ನಿಂದ ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಪವನ್ ತಲೆಗೆ ತೀವ್ರವಾಗಿ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಗಾದೆ ಮೃತಪಟ್ಟಿದ್ದರು. ಇನ್ನೋರ್ವ ಗಾಯಾಳು ಮಂಜುನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.