2.94 ಕೋಟಿ ಉಳಿತಾಯ ಬಜೆಟ್​ ಮಂಡನೆ : ಕೋಲಾರ ನಗರಸಭೆ ಆದಾಯ ಹೆಚ್ಚಿಸಿಕೊಳ್ಳಲು ಸದಸ್ಯರ ಸಲಹೆ

1
Published on

ಕೋಲಾರ: ಕೋಲಾರ ನಗರಸಭೆಯ 2022-23ನೇ ಸಾಲಿಗೆ 2.94 ಕೋಟಿ ರೂ. ಉಳಿತಾಯ ಬಜೆಟ್​ ಮಂಡನೆಯಾಗಿದ್ದು, 1.34 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.

ಅಧ್ಯಕ್ಷೆ ಶ್ವೇತಾಶಬರೀಶ್​ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ 134.78 ಕೋಟಿ ರೂ. ಗಾತ್ರದ

ಬಜೆಟ್​ ಮಂಡಿಸಿದ್ದು, 131.84 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಿದ್ದು, ಆಸ್ತಿ ತೆರಿಗೆ 7.24 ಕೊಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ.

ಜಾಹಿರಾತಿನಿಂದ 7.68 ಲಕ್ಷ ರೂ., ನೀರಿನ ತೆರಿಗೆಯಿಂದ 98.18 ಲಕ್ಷ ರೂ., ಒಳಚರಂಡಿ ಬಳಕೆದಾರರ ಶುಲ್ಕ 50 ಲಕ್ಷ ರೂ., ಘನ ತ್ಯಾಜ್ಯ ನಿರ್ವಹಣೆ ಶುಲ್ಕ 55 ಲಕ್ಷ ರೂ., ವಾಣಿಜ್ಯ ಮಳಿಗೆಗಳ ಬಾಡಿಗೆ 64.15 ಲಕ್ಷ ರೂ., ಅಭಿವೃದ್ಧಿ ಶುಲ್ಕ 7 ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕ 50 ಲಕ್ಷ ರೂ., ಮಾರುಕಟ್ಟೆ, ಖಾಸಗಿ ಬಸ್​ ನಿಲ್ದಾಣ ಮತ್ತು ವಾರದ ಸಂತೆ ಹರಾಜಿನಿಂದ 14.50 ಲಕ್ಷ ರೂ., ಲೈಸೆನ್ಸ್​ ಶುಲ್ಕದಿಂದ 35 ಲಕ್ಷ ರೂ., ಇತರ ವಸೂಲಿಯಿಂದ 3.79 ಕೊಟಿ ರೂ., ಎಸ್​ಎಫ್​ಸಿ ಅನುದಾನ 2.06 ಕೋಟಿ ರೂ., ವೇತನ ಅನುದಾನದಿಂದ 5.66 ಕೋಟಿ ರೂ., ವಿದ್ಯುತ್​ ಅನುದಾನದಿಂದ 19.39 ಕೋಟಿ ರೂ., ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ 60 ಲಕ್ಷ ರೂ., ಎಸ್​ಎಫ್​ಸಿ ಬರ ಪರಿಹಾರ ಅನುದಾನದಿಂದ 10 ಲಕ್ಷ ರೂ., 15ನೇ ಹಣಕಾಸು ಅನುದಾನ 5.41 ಕೋಟಿ ರೂ., ಅಮೃತ್​ ಯೋಜನೆ, ನಿರ್ಮಲ ನಗರ ಅನುದಾನದಿಂದ 7.50 ಕೋಟಿ ರೂ., ಜಿಲ್ಲಾಧಿಕಾರಿ ಸಿಆರ್​ಎಫ್​ ಅನುದಾನದಿಂದ 50 ಲಕ್ಷ ರೂ., ಗೃಹ ಭಾಗ್ಯ, ಆಶ್ರಯ ಯೋಜನೆ ಅನುದಾನದಿಂದ 12 ಕೋಟಿ ರೂ., ಎಸ್​ಎಫ್​ಸಿ ವಿಶೇಷ ಅನುದಾನದಿಂದ 5 ಕೋಟಿ ರೂ., ಬಂಡವಾಳ ಆದಾಯ ಅನುದಾನದಿಂದ 17.28 ಕೊಟಿ ರೂ., ಮೀಸಲಾತಿ ಅನುದಾನಗಳಿಂದ 68.23 ಲಕ್ಷ ರೂ., ಅಸಾಮಾನ್ಯ ಸಾಲ, ಅಮಾನತ್​ ಖಾತೆ ಲೆಕ್ಕ ಹೊಂದಾಣಿಕೆಯಿಂದ 6.99 ಕೋಟಿ ರೂ., ಪ್ರಾರಂಭಿಕ ಶುಲ್ಕ 36.66 ಕೋಟಿ ರೂ. ನೀರಿಸಲಾಗಿದೆ.

ನಗರ ನಿರ್ಮಲೀಕರಣಕ್ಕೆ 4.85 ಕೋಟಿ ರೂ., ರಸ್ತೆ ದುರಸ್ತಿ, ಮೆಟ್ಲಿಂಗ್​ಗಾಗಿ 50 ಲಕ್ಷ ರೂ., ಬೀದಿ ದೀಪ ವಿದ್ಯುತ್​ ಬಿಲ್​ಗೆ 4.20 ಕೋಟಿ ರೂ., ನೀರು ಸರಬರಾಜು, ವಿದ್ಯುತ್​ ಬಿಲ್​ಗೆ 15.19 ಕೋಟಿ ರೂ., ಬೀದಿದೀಪಗಳ ನಿರ್ವಹಣೆಗೆ 1.10 ಕೋಟಿ ರೂ., ಪೈಪ್​ ಲೈನ್​, ಮೋಟಾರ್​ ಪಂಪ್​ ದುರಸ್ತಿಗೆ 4.62 ಕೋಟಿ ರೂ., ಘನ ತ್ಯಾಜ್ಯ ವಸ್ತು ಸಲಕರಣೆ ಖರೀದಿಗೆ 25.78 ಲಕ್ಷ ರೂ., ಜಮೀನು ಖರೀದಿಗಾಗಿ 10 ಕೋಟಿ ರೂ., ಕಟ್ಟಡ ನಿಮಾರ್ಣಕ್ಕೆ 71 ಲಕ್ಷ ರೂ., ವಾಹನ ಖರೀದಿಗಾಗಿ 2.61 ಕೋಟಿ ರೂ., ಹೊಸ ಚರಂಡಿ, ಮಳೆ ನೀರು ಚರಂಡಿ ನಿಮಾರ್ಣಕ್ಕೆ 6.59 ಕೋಟಿ ರೂ., ಬೀದಿ ದೀಪಗಳ ಖರೀದಿಗಾಗಿ 60 ಲಕ್ಷ ರೂ., ಖಸಾಯಿ ಖಾನೆ ನಿಮಾರ್ಣಕ್ಕಾಗಿ 50 ಲಕ್ಷ ರೂ., ವೇತನ ಪಾವತಿಗೆ 6.19 ಕೋಟಿ ರೂ., ಹೊಸ ಕೊಳವೆಬಾವಿ ಕೊರೆಯಲು 1.72 ಕೋಟಿ ರೂ., ಹೊಸ ಪಂಪ್​ ಸೆಟ್​ ಖರೀದಿಗೆ 1.60 ಕೋಟಿ ರೂ., ಹೊಸ ಪೈಪ್​ ಲೈನ್​ಗಾಗಿ 1.17 ಕೋಟಿ ರೂ., ಒಳಚರಂಡಿ ಸಂಪರ್ಕಜಾಲ ಅಳವಡಿಕೆಗೆ 52.5 ಲಕ್ಷ ರೂ., ಉದ್ಯಾನ ಅಭಿವೃದ್ಧಿ, ಅರಣ್ಯೀಕರಣಕ್ಕೆ 77.5 ಲಕ್ಷ ರೂ., ಮಾರುಕಟ್ಟೆ ನಿಮಾರ್ಣಕ್ಕೆ 8 ಕೋಟಿ ರೂ., ಇತರ ವೆಚ್ಚಗಳಿಗಾಗಿ 8.79 ಕೋಟಿ ರೂ., ಇತರ ಬಂಡವಾಳ ವೆಚ್ಚಗಳಿಗಾಗಿ 14.2 ಕೋಟಿ ರೂ., ಗೃಹಭಾಗ್ಯ ಯೋಜನೆಗಾಗಿ 2 ಕೋಟಿ ರೂ., ಅಸಾಮಾನ್ಯ ಸಾಲ, ಅಮಾನ ಖಾತೆಗಾಗಿ 25.5 ಕೋಟಿ ರೂ., ವಿವಿಧ ಸಮುದಾಯದವರಿಗಾಗಿ 2 ಕೋಟಿ ರೂಪಾಯಿ ಮೀಸಲು ಇಟ್ಟಿರುವುದಾಗಿ ಸಭೆಗೆ ವಿವರಣೆ ನೀಡಲಾಯಿತು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಸದಸ್ಯರು ಸಭೆಯ ಗಾಂಭೀರ್ಯ ಕಾಪಾಡಬೇಕು. ಬೇರೊಬ್ಬ ಸದಸ್ಯ ಮಾತನಾಡುವಾಗ ಅವರ ಮಾತು ತಡೆದು ಇಬ್ಬರು, ಮೂವರು ನಿಂತು ಕಿರುಚಾಡುವುದು ಸಭೆಗೆ ಶೋಭೆ ತರುವುದಿಲ್ಲ. ಹೀಗಾದರೆ ಯಾರು ಏನು ಮಾತನಾಡುತ್ತಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಪೌರಾಯುಕ್ತ, ಅಧ್ಯಕ್ಷೆ ಸಹ ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಬೇಕು ಎಂದು ಸಲಹೆ ನೀಡಿದರು.

ನಗರಸಭೆ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಆದ್ಯತೆ ನೀಡಬೇಕು. ಪ್ರಮುಖವಾಗಿ ಆದಾಯ ಮೂಲಗಳಾದ ವಾಣಿಜ್ಯ ಮಳಿಗೆಗಳು, ಕಲ್ಯಾಣ ಮಂಟಪಗಳು, ವೈನ್​ಷಾಫ್​, ಬಾರ್​ ಮತ್ತು ರೆಸ್ಟೋರೆಂಟ್​ಗಳಿಂದ ಸೂಕ್ತ ತೆರಿಗೆ ವಸೂಲಿ ಮಾಡಲು ಮುಂದಾಗಬೇಕು ಎಂದು ಹಲವು ಸದಸ್ಯರು ಸಲಹೆ ನೀಡಿದರು.

ಉಪಾಧ್ಯಕ್ಷ ಪ್ರವಿಣ್​ ಗೌಡ, ಪೌರಾಯುಕ್ತ ಪ್ರಸಾದ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net