

ರಾಯಚೂರು: ಶಾಲೆಗಳಿಗೆ ರಜೆ ಹಾಗೂ ಸಾಲು ಸಾಲು ರಜೆಗಳ ಕಾರಣಕ್ಕೆ ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಕಳೆದ ತಿಂಗಳು ರಾಯರ ಹುಂಡಿಗೆ ಅತ್ಯಕ ಪ್ರಮಾಣದ ಕಾಣಿಕೆ ಜಮಾವಣೆಯಾಗಿದೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ ಮಠದಲ್ಲಿನ ಬುಧವಾರ ಜರುಗಿದ ಹುಂಡಿಯಲ್ಲಿನ ಹಣ ಏಣಿಕೆ ಕಾರ್ಯದಲ್ಲಿ ಮೇ ತಿಂಗಳಲ್ಲಿ ವಿವಿಧ ವೌಲ್ಯದ 2.85 ಕೋಟಿ ರೂ. ನಗದು, 7.54 ಲಕ್ಷ ರೂ. ವೌಲ್ಯದ ನಾಣ್ಯಗಳು ಸೇರಿದಂತೆ 2.93 ಕೋಟಿ ರೂ. ಹಾಗೂ 136 ಗ್ರಾಂ ಚಿನ್ನ, 1,510 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ.