ಕನ್ನಡ ಹಬ್ಬಕ್ಕೆ 2.92ಲಕ್ಷ ರೂ. ಖರ್ಚು

JYD KASAPA
Published on

ಜೊಯಿಡಾ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು 2,92,661 ರೂ. ಖರ್ಚಾಗಿದೆ. ದಾನಿಗಳಿಂದ 2,82,000 ರೂ. ದೇಣಿಗೆ ಸಂಗ್ರಹವಾಗಿದೆ. ಹೆಚ್ಚುವರಿಯಾಗಿ 10,661ರೂ. ಖರ್ಚಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಪಾಂಡುರಂಗ ಪಟಗಾರ ಹೇಳಿದರು.

ಕುಣಬಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ಮಂಡಣೆ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ಪರಿಷತ್ ಖಜಾಂಚಿ ತುಳಸಿದಾಸ ವೇಳಿಪ ಅವರು ಲೆಕ್ಕ ಪತ್ರ ಓದಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಂತೋನಿ ಜೋನ, ರಾಮನಗರ ಗ್ರಾಪಂ ಅಧ್ಯಕ್ಷ ಶಿವಾಜಿ ಗೋಸಾವಿ, ತಾಲೂಕು ಕಾರ್ಯದರ್ಶಿ ಪ್ರೇಮಾನಂದ ವೇಳಿಪ, ಸುಭಾಷ ಗಾವಡಾ, ಅರುಣ ಕಾಂಬ್ರೇಕರ,. ಎಂ.ಎಚ್. ಖಲಿಫಾ, ಜಯಾನಂದ ಡೇರೆಕರ, ಸುಭಾಷ ವೇಳಿಪ, ಪಾಂಡುರಂಗ ಗಾವಡಾ, ರವಿ ಮಿರಾಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net