

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿನ ಹುಂಡಿಗಳಿಗೆ ಕಳೆದ ನವೆಂಬರ್ ತಿಂಗಳಲ್ಲಿ ಒಟ್ಟು 2.86 ಕೋಟಿ ರೂ. ನಗದು, 62 ಗ್ರಾಂ ಬಂಗಾರ ಮತ್ತು 1,934 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ.
ಶ್ರೀಮಠದಲ್ಲಿ ಶುಕ್ರವಾರ ಜರುಗಿದ ಹುಂಡಿಯಲ್ಲಿನ ಹಣದ ಎಣಿಕೆ ಕಾರ್ಯದಲ್ಲಿ ವಿವಿಧ ವೌಲ್ಯದ 2.79 ಕೋಟಿ ರೂ. ನೋಟುಗಳು ಮತ್ತು 6.76 ಲಕ್ಷ ರೂ. ವೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು 2.86 ಕೋಟಿ ರೂ. ಕಾಣಿಕೆಯಾಗಿದೆ ಬಂದಿದೆ.
ಹಿಂದಿನ ಎರಡು ತಿಂಗಳಲ್ಲಿ ಹುಂಡಿಯಲ್ಲಿ 3 ಕೋಟಿ ರೂ.ಗೂ ಅಕ ಮೊತ್ತದ ಹಣ ಕಾಣಿಕೆ ರೂಪದಲ್ಲಿ ಬಂದಿತ್ತು. ಈ ತಿಂಗಳ ಭಕ್ತರು ನೀಡಿರುವ ಕಾಣಿಕೆಯಲ್ಲಿ ಇಳಿಮುಖವಾಗಿದೆ.