ಪಿಎಲ್‌ಡಿ ಬ್ಯಾಂಕ್‌ನಿಂದ 2.85 ಕೋಟಿ ಸಾಲ ವಿತರಣೆ

23sor2
ಸೊರಬ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ನಾಗರಾಜ ಗೌಡ ಚಿಕ್ಕಾವಲಿ ಮಾತನಾಡಿದರು. ಕೆ.ಎಸ್.ನಂದೀಶ್, ಟಿ.ನಾಗಪ್ಪ, ಎಚ್.ಮಲ್ಲಿಕಾರ್ಜುನ ಗೌಡ, ಕೃಷ್ಣಮೂರ್ತಿ ಇತರರಿದ್ದರು.
Published on

ಸೊರಬ: ಸಹಕಾರ ಸಂಘಗಳ ಆರ್ಥಿಕ ಅಭಿವೃದ್ಧಿಯಲ್ಲಿ ಷೇರುದಾರದ ಪಾತ್ರ ಹಿರಿದು. ಪ್ರತಿಯೊಬ್ಬರು ಸಕಾಲಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ ಸಂಘದ ಪ್ರಗತಿಗೆ ಶ್ರಮಿಸುವ ಅಗತ್ಯವಿದೆ ಎಂದು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ನಾಗರಾಜ ಗೌಡ ಚಿಕ್ಕಾವಲಿ ಹೇಳಿದರು.

ಪಟ್ಟಣದ ಲಯನ್ಸ್ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೊರಬ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಕಳೆದ 80 ವರ್ಷಗಳಿಂದ ಬ್ಯಾಂಕ್ ಆಡಳಿತ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವಂತೆ ಬೆಳೆ, ಮಧ್ಯಮಾವಧಿ ಹಾಗೂ ಜಾಮೀನು ಸಾಲ ಸೇರಿದಂತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬ್ಯಾಂಕಿನ ಷೇರುದಾರ ಸದಸ್ಯರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ. 5,667 ಷೇರುದಾರರಿದ್ದು 2.85 ಕೋಟಿ ರೂ. ಸಾಲ ನೀಡಲಾಗಿದೆ ಎಂದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಷೇರುದಾರರ ಮಕ್ಕಳನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ಕೆ.ಎಸ್.ನಂದೀಶ್, ನಿರ್ದೇಶಕರಾದ ಟಿ.ನಾಗಪ್ಪ, ಎಚ್.ಮಲ್ಲಿಕಾರ್ಜುನ ಗೌಡ, ಕೃಷ್ಣಮೂರ್ತಿ, ಶಿವಕುಮಾರ ಗೌಡ, ವೀರೇಂದ್ರಕುಮಾರ್, ಸಿ.ವಿಜೇಂದ್ರಕುಮಾರ್, ಜೈ ಕುಮಾರ್, ಕಲ್ಲಪ್ಪ ಯಲಕುಂದ್ಲಿ, ಗೌರಮ್ಮ, ಸುಮಿತ್ರಾ ಬಾಯಿ, ನಿಂಗಪ್ಪ, ಶಾರದಾ ಹಳೇಸೊರಬ, ವ್ಯವಸ್ಥಾಪಕ ಸಂಜಯ್, ಕ್ಷೇತ್ರಾಧಿಕಾರಿ ಸತೀಶ್ ಭಂಡಾರಿ, ಮಂಜುನಾಥಸ್ವಾಮಿ, ಡಿ.ಟಿ.ಸುಬ್ರಹ್ಮಣ್ಯ, ಗಣಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net