ಮಹಿಳಾ ಸಹಕಾರ ಬ್ಯಾಂಕ್‌ಗೆ 2.76 ಕೋಟಿ ನಿವ್ವಳ ಲಾಭ

12ckm6- bank
ಚಿಕ್ಕಮಗಳೂರಲ್ಲಿ ನಡೆದ ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್‌ನ 24ನೇ ವಾರ್ಷಿಕ ಸಭೆಯನ್ನು ಅಧ್ಯಕ್ಷೆ ಬಿ.ಸಿ.ಗೀತಾ ಉದ್ಘಾಟಿಸಿದರು. ಸುಧಾರಾಜು, ಜೋಷಿ, ಸುಜಾತಾ, ಅರುಂಧತಿ ಇದ್ದರು.
Published on

ಚಿಕ್ಕಮಗಳೂರು: ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ 2.76 ಕೋಟಿ ರೂ. ನಿವ್ವಳ ಲಾಭಗಳಿಸಿದ್ದು, ಷೇರುದಾರರಿಗೆ ಶೇ.12ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ ಹೇಳಿದರು.
ಬಸವನಹಳ್ಳಿಯಲ್ಲಿ ಶನಿವಾರ ನಡೆದ ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್‌ನ 24ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಕಡಿಮೆ ಬಂಡವಾಳದಿಂದ ಪ್ರಾರಂಭವಾದ ಬ್ಯಾಂಕ್ ಇಂದು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.
1999ರಲ್ಲಿ ಪ್ರಾರಂಭವಾದ ಮಹಿಳಾ ಬ್ಯಾಂಕ್ ನಿರಂತರವಾಗಿ ಅಭಿವೃದ್ಧಿ ಕಡೆ ಸಾಗುತ್ತಿದ್ದು, ಎ ವರ್ಗದ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ. ಮುಂಬಯಿಯ ಬ್ಯಾಂಕೊ ಅವಿಷ್ ಪಬ್ಲಿಕೇಷನ್ ಉತ್ತಮ ಮಹಿಳಾ ಬ್ಯಾಂಕ್ ಎಂಬ ಪ್ರಶಸ್ತಿ ಪಡೆದಿದೆ. ಎಂದು ತಿಳಿಸಿದರು.
ಪ್ರಸುತ್ತ 246.24 ಕೋಟಿ ರೂ. ಠೇವಣಿ ಹೊಂದಿದ್ದು, 172.12 ಕೋಟಿ ರೂ ಹೊರಬಾಕಿ ಸಾಲ, ವಾಹನ ಸಾಲ, ವೇತನಾಧರಿತ ಸಾಲ, ಗೃಹಪೋಪಕರಣ ಸಾಲ, ಗೃಹ ನಿರ್ಮಾಣ ಸಾಲ, ವ್ಯಾಪಾರಾಭಿವೃದ್ಧಿ ಸಾಲ ಸೇರಿದಂತೆ ವಿವಿಧ ರೀತಿಯ ಸಾಲ ಸೌಲಭ್ಯ ನೀಡಿದೆ. ಒಟ್ಟು 6,896 ಸದಸ್ಯರನ್ನು ಹೊಂದಿದ್ದು, ಮಹಿಳಾ ಬ್ಯಾಂಕ್ 8.96 ಕೋಟಿ ರೂ.ಷೇರು ಬಂಡವಾಳ ಹೊಂದಿದೆ ಎಂದರು.
ಉಪಾಧ್ಯಕ್ಷೆ ಸುಧಾ ರಾಜು, ನಿರ್ದೇಶಕರಾದ ಬನಶಂಕರಿ ಜೋಷಿ, ಸುಜಾತಾ ಕೃಷ್ಣಮೂರ್ತಿ, ಕಮಲಾ ಬಸವರಾಜು, ಸೌಭಾಗ್ಯ ಗೋಪಾಲನ್, ಸರೋಜಮ್ಮ ಸಿದ್ದಮಲ್ಲಪ್ಪ, ಯಮುನಾಸಿ.ಶೆಟ್ಟಿ, ಜಯಶ್ರೀ ನಂಜರಾಜ್, ಜಯಲಕ್ಷ್ಮೀ ರಾಮೇಗೌಡ, ತಾರಾ ಮೋಹನ್, ಅನುಪಮಾ, ಕವಿತಾನಾಯಕ್, ಮೀನಾ, ಆಶಾ ಹೇಮಂತಕುಮಾರ್, ಅರುಂಧತಿ, ಎಂ.ಸಿ.ಸುಮಾ, ಪ್ರಧಾನ ವ್ಯವಸ್ಥಾಪಕ ಬಿ.ಆರ್.ಸತೀಶ್, ಶಾಖಾ ವ್ಯವಸ್ಥಾಪಕರಾದ ಕವಿತಾ, ಅಜಿತ್‌ಕುಮಾರ್, ಶ್ರೀರಾಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net