2.64 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ಟ್ರಾವೆಲ್ ಟ್ರೈಯಾಂಗಲ್ ಆನ್‌ಲೈನ್ ಪ್ಲಾಟ್ ಫಾರ್ಮ್‌ನಲ್ಲಿ ಹೋಟೆಲ್ ರೆಸ್ಟೋರೆಂಟ್‌ಗಳಿಗೆ 5 ಸ್ಟಾರ್ ರೇಟಿಂಗ್ ಕೊಟ್ಟರೆ ಹಣ ಗಳಿಸಬಹುದೆಂದು ನಂಬಿಸಿದ ದುರುಳರು, ಧಾರವಾಡದ ವ್ಯಕ್ತಿಯಿಂದ 2.64 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಧಾರವಾಡದ ರಾಘವೇಂದ್ರ ವಂಚತನೆಗೊಳಗಾದವರು. ಕಾವ್ಯಾ, ಅವಿನಾಶ ಗುಪ್ತಾ ಎಂಬುವರು, ಎರಡ್ಮೂರು ಟಾಸ್ಕ್ ಪೂರ್ಣಗೊಳಿಸಿದ್ದಕ್ಕೆ 8,800 ರೂ. ಕೊಟ್ಟು ಆಸೆ ಹಚ್ಚಿದ್ದಾರೆ. ನಂತರ 2.64 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net