2.56 ಲಕ್ಷ ರೂ. ಚಿನ್ನಾಭರಣ ಕಳ್ಳತನ

Crime Logo
Published on

ಕಲಬುರಗಿ: ನಗರದ ಶಿವಲಿಂಗೇಶ್ವರ ಕಾಲನಿಯ ಮನೆಯಲ್ಲಿಟ್ಟದ್ದ ೨.೫೬ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಅಣ್ಣನ ಮಗನೇ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ ಎಂದು ನಗರದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯಡ್ರಾಮಿ ಪಿಎಚ್‌ಸಿಯಲ್ಲಿ ಕಿರಿಯ ಸುರಕ್ಷಣಾಧಿಕಾರಿ ಆಗಿರುವ ಮಹಾನಂದ ಚಿಂಚೋಳಿ ಅವರ ಮನೆಯಲ್ಲಿ ಕಳ್ಳತನವಾಗಿದೆ.
ಜು.೮ರಂದು ಮನೆಗೆ ಆಗಮಿಸಿದ್ದ ಅಣ್ಣನ ಮಗ ಅಂಬರೀಶನು ಎಲ್ಲರೂ ಮನೆಯಿಂದ ಹೋದ ನಂತರ ಒಬ್ಬನೇ ಇದ್ದು, ಮನೆಯ ಅಲಮಾರಿಯಲ್ಲಿದ್ದ ೪೦ ಗ್ರಾಂ ಪಾಟಲಿ, ೪೦ ಗ್ರಾಂ ಕರಿಮಣಿ ಮಂಗಳಸೂತ್ರ, ೨೦ ಗ್ರಾಂ ಎರಡೆಳೆ ಸರ, ೫ ಗ್ರಾಂ ಕಪಾಲ ಸುತ್ತುಂಗುರ, ೭ಗ್ರಾಂ ಗಣೇಶ ಪೆಂಡೆAಟ್, ೨.೩ ಗ್ರಾಂ ಹರಳಿನ ಉಂಗುರ, ೨ ಗ್ರಾಂ ಕಿವಿಯೋಲೆ, ೧.೫ ಹರಳಿನ ಕಿವಿಯೋಲೆ, ೧ ಗ್ರಾಂ ಹರಳಿನ ಕಿವಿಯೋಲೆ, ೧ ಗ್ರಾಂ ಮಕ್ಕಳ ಉಂಗುರ, ೩ ಗ್ರಾಂ ಕೈಮಣಿ ಸೇರಿ ಒಟ್ಟು ೨.೫೬ ಲಕ್ಷ ರೂ. ಮೌಲ್ಯದ ೧೨೦.೮ ಗ್ರಾಂನ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿದೆ. ಜು.೮ರಿಂದ ೯ರವರೆಗೆ ಮನೆಗೆ ಅಂಬರೀಶ ಮಾತ್ರ ಮನೆಗೆ ಬಂದಿದ್ದು, ಆತನೇ ಕಳ್ಳತನ ಮಾಡಿರಬಹುದು ಎಂದು ಮಹಾನಂದ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net