2.50 ಲಕ್ಷ ರೂ. ಮೌಲ್ಯ 80 ಗ್ರಾಂ ಚಿನ್ನಾಭರಣ ಕಳವು

crime
Published on

ಮೈಸೂರು: ವ್ಯಾಪಾರಿಯೊಬ್ಬರ ಬಳಿಯಿದ್ದ 2.50 ಲಕ್ಷ ರೂ. ಮೌಲ್ಯ 80 ಗ್ರಾಂ ಚಿನ್ನಾಭರಗಳನ್ನು ಖದೀಮನೊಬ್ಬ ಕಳುವು ಮಾಡಿದ್ದಾರೆ.

ನಗರದ ಜೆಪಿನಗರದ ಚಂದನ ಜ್ಯುವೆಲರೀಸ್ ಮಾಲೀಕ ಚಂದ್ರಪ್ರಕಾಶ್ ಅವರು ತಯಾರಿಸಿದ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವ ಸಂಬಂಧ ಬುಧವಾರ ಬೈಕ್‌ನ ಪರ್ಸ್‌ನಲ್ಲಿ ಇಟ್ಟುಕೊಂಡು ತೆರಳುತ್ತಿದ್ದರು. ಈ ವೇಳೆ ಅವರ ಮೊಬೈಲ್‌ಗೆ ಕರೆ ಬಂದಿದೆ. ಹೀಗಾಗಿ ಇಸ್ಕಾನ್ ದೇವಾಲಯದ ಬಳಿ ಬೈಕ್ ನಿಲ್ಲಿಸಿ ಮೊಬೈಲ್ ಮೂಲಕ ಮಾತನಾಡುತ್ತಿದ್ದರು.

ಈ ವೇಳೆ ಅಲ್ಲಿಗೆ ಬೈಕ್‌ನಲ್ಲಿ ಬಂದ ಖದೀಮ, ಚಂದ್ರಪ್ರಕಾಶ್ ಅವರ ಬೈಕ್‌ನ ಪರ್ಸ್‌ಗೆ ಕೈಹಾಕಿ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net