ಚಿತ್ರದುರ್ಗ: ಅಂಗಡಿಗೆ ಟೀ ಪೌಡರ್ ತರಲು ತೆರಳುತ್ತಿದ್ದ ನಗರದ ಮುನ್ಸಿಪಲ್ ಕಾಲನಿಯ ಅನ್ನಪೂರ್ಣಮ್ಮ ಎಂಬುವವರ ಕೊರಳಲ್ಲಿದ್ದ 45 ಗ್ರಾಂ ತೂಕದ 2.5 ಲಕ್ಷ ರೂ.ಮೌಲ್ಯದ ಬಂಗಾರದ ಸರ ಕದ್ದು ಕಳ್ಳರು ಪರಾರಿಯಾಗಿದ್ದಾರೆ.
ಘಟನೆಯೂ ಭಾನುವಾರ ಬೆಳಕಿಗೆ ಬಂದಿದ್ದು, ಬಡಾವಣೆ ಠಾಣೆ ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.