ಕರ್ನಾಟಕ ಸಂಸ್ಕೃ ವಿವಿ ದತ್ತಿ ನಿಧಿಗೆ 2.5 ಲಕ್ಷ ರೂ. ದೇಣಿಗೆ

17
Published on

ಮೈಸೂರು: ನಗರದ ಸತ್ಯವತಿ ವಿಜಯರಾಘವಾಚಾರ್ ಚಾರಿಟಬಲ್ ಟ್ರಸ್ಟ್‌ನಿಂದ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ದತ್ತಿ ನಿಧಿಗೆ 2.5ಲಕ್ಷ ರೂ. ದೇಣಿಗೆ ನೀಡಲಾಯಿತು.

ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ಅಹಲ್ಯಾ ಅವರಿಗೆ ಟ್ರಸ್ಟ್‌ನ ಸಹೋದರಿಯರಾದ ಎ.ಪುಷ್ಪಾ ಅಯ್ಯಂಗಾರ್, ಎ.ವೈದೇಹಿ ಅಯ್ಯಂಗಾರ್ ಅವರು ದೇಣಿಗೆ ಚೆಕ್ ಅನ್ನು ಬುಧವಾರ ಹಸ್ತಾಂತರಿಸಿದರು.

ಎ.ಪುಷ್ಪಾ ಅಯ್ಯಂಗಾರ್ ಮಾತನಾಡಿ, ಸತ್ಯಾವತಿ ಹಾಗೂ ವಿಜಯ ರಾಘವಾಚಾರ್ ಅವರ ಹೆಸರಿನಲ್ಲಿ ಇಂತಹ ಸೇವಾ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ. ಕನ್ನಡ ಸೇವೆ ಜತೆಗೆ ಆಹಾರ, ಅಕ್ಷರ ಮತ್ತು ಆರೋಗ್ಯಕ್ಕೆ ಉತ್ತೇಜನ ನೀಡುವುದೇ ನಮ್ಮ ಉದ್ದೇಶವಾಗಿದ್ದು, ಯಾವುದೇ ಜಾತಿ-ಮತ ಭೇದವಿಲ್ಲದೇ ಸಹಕಾರ ನೀಡಲಾಗುತ್ತಿದೆ ಎಂದರು.

ಕುಲಪತಿ ಡಾ.ಎಸ್.ಅಹಲ್ಯಾ ಮಾತನಾಡಿ, ತಮ್ಮ ಇಳಿವಯಸ್ಸಿನಲ್ಲಿಯೂ ಸಹೋದರಿಯರ ನಿಸ್ವಾರ್ಥ ಸೇವೆ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ. ದೇಣಿಗೆಯಿಂದ ಹಲವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಟ್ರಸ್ಟ್‌ನ ಎ.ವೈದೇಹಿ ಅಯ್ಯಂಗಾರ್, ವಿಜಯನಗರದ ಶ್ರೀಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net