ಮೈಸೂರು ಪೊಲೀಸರಿಂದ 2.5 ಕೆ.ಜಿ ಬೆಳ್ಳಿ, 245 ಗ್ರಾಂ ಚಿನ್ನಾಭರಣ ವಶ

14
Published on

ಮೈಸೂರು: ಚಿನ್ನ ಕಳುವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ನಜರ್‌ಬಾದ್ ಠಾಣೆ ಪೊಲೀಸರು, 17 ಲಕ್ಷ ರೂ. ಮೌಲ್ಯದ 245 ಗ್ರಾಂ ತೂಕದ ಚಿನ್ನಾಭರಣ, 2.5 ಕೆ.ಜಿ ತೂಕದ ಬೆಳ್ಳಿ ಪದಾರ್ಥ ವಶ ಪಡಿಸಿಕೊಂಡಿದ್ದಾರೆ.
ಸಿದ್ದಾರ್ಥನಗರ ಸನ್ಮಾರ್ಗ ರಸ್ತೆಯಲ್ಲಿರುವ ಮನೆಯೊಂದರಲ್ಲಿ 245 ಗ್ರಾಂ ಚಿನ್ನಾಭರಣ ಮತ್ತು 2 ಕೆಜಿ 500 ಗ್ರಾಂ ಬೆಳ್ಳಿ ಪಧಾರ್ಥಗಳನ್ನು ಕಳ್ಳತನ ಮಾಡಿದ್ದರು. ಈ ಬಗ್ಗೆ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆ ನಡೆಸಿದ ಪೊಲೀಸರು, ಸೆ.8ರಂದು ನಂಜನಗೂಡಿನಲ್ಲಿ ಆರೋಪಿಗಳು ಇರುವ ಸುಳಿವಿನ ಮೇಲೆ ಬಂಧಿಸಿದ್ದಾರೆ. ಒಟ್ಟು 17 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ನಜರ್‌ಬಾದ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಮಹದೇವಸ್ವಾಮಿ, ಪಿಎಸ್‌ಐಗಳಾದ ಶ್ರೀನಿವಾಸ್ ಪಾಟೀಲ್, ಪಿ.ನಟರಾಜು, ಸಿಬ್ಬಂದಿ ಎಂ. ಪ್ರದೀಪ್, ವಿ.ವಿ.ಪ್ರಕಾಶ್, ಎಚ್.ರಮೇಶ್, ಎಸ್.ಪಿ.ಸತೀಶ್‌ಕುಮಾರ್, ಎಂ.ಸಂಜು, ವೆಂಕಟೇಶ್, ಮೊಹಮ್ಮದ್ ಇಸ್ಮಾಹಿಲ್ ಪ್ರವೀಣ್, ತಾಂತ್ರಿಕ ವಿಭಾಗದ ಕುಮಾರ್ ಇತರರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net