2.5 ಕೋಟಿ ರೂ.ಅನುದಾನಕ್ಕೆ ಪ್ರಸ್ತಾವನೆ

web2
ಯರಗಟ್ಟಿ ಪಟ್ಟಣದಲ್ಲಿ ಎಪಿಎಂಸಿ ಸರ್ಕಾರಿ ನಾಮನಿರ್ದೇಶಿತ ಸದಸ್ಯರನ್ನು ಸನ್ಮಾನಿಸಲಾಯಿತು. ಶಾಸಕ ವಿಶ್ವಾಸ ವೈದ್ಯ, ನೀಲಕಂಠ ಶೀದಬಸನ್ನವರ, ಬಸವರಾಜ ಆರಿಬೆಂಚಿ ಇತರರಿದ್ದರು.
Published on

ಯರಗಟ್ಟಿ: ನೂತನ ತಾಲೂಕು ಯರಗಟ್ಟಿಯನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಶೀಘ್ರ ಎಲ್ಲ ತಾಲೂಕು ಕಚೇರಿಗಳು ಕಾರ್ಯಾರಂಭ ಮಾಡಲಿವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕಿನ ಎಪಿಎಂಸಿ ನಾಮನಿರ್ದೇಶಿತ ಸದಸ್ಯರ
ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಪಿಎಂಸಿ ಯಾರ್ಡ್ ಇಂದಿನಿಂದ ಕೆಲಸ ಕಾರ್ಯ ಆರಂಭಿಸುತ್ತದೆ. ರೈತರಿಗೆ ಎಲ್ಲ ಸೌಕರ್ಯಗಳು ಸಿಗುತ್ತವೆ, ಇದಕ್ಕೆ ಅವಶ್ಯವಾಗಿ ಬೇಕಾದ ರಸ್ತೆ, ಚರಂಡಿ ಸೇರಿ ವಿವಿಧ ಸೌಲಭ್ಯಕ್ಕಾಗಿ ನಬಾರ್ಡ್ ಬ್ಯಾಂಕ್‌ನಿಂದ 2.5 ಕೋಟಿ ರೂ.ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ನೂತನ ಅಧ್ಯಕ್ಷ ನುಗ್ಗಾನಟ್ಟಿಯ ನೀಲಕಂಠ ಸಿದಬಸನ್ನವರ, ಉಪಾಧ್ಯಕ್ಷ ಸೊಪ್ಪಡ್ಲದ ಬಸವರಾಜ ಆರಿಬೆಂಚಿ, ನಿರ್ದೇಶಕರಾದ ಬಸಪ್ಪಗೌಡ ಬಿ.ಪಾಟೀಲ, ಮಹಾದೇವಪ್ಪ ದಾಸಪ್ಪನವರ, ಮುಬಸೀರ್ ಬಾಗವಾನ, ಬಸವರಾಜ
ಮಾಳಕ್ಕನವರ, ಸಿದ್ಧಾರೂಢ ಬಿಲಕಂಚಿ, ಸಿಶಿಲಾ ಖಂಡ್ರಿ, ರೇಖಾ ಯರಡ್ಡಿ, ಮಮ್ಮದ್‌ರಫೀಕ್ ದಿಲಾವರನಾಯ್ಕ ಅವರನ್ನು ಸನ್ಮಾನಿಸಲಾಯಿತು. ನಿಖಿಲ ದೇಸಾಯಿ, ರಾಜಶೇಖರ ಕಾರದಗಿ, ಕೀರಪ್ಪ ಹದ್ದನ್ನವರ, ಮಲೀಕಸಾಬ್ ಬಾಗವಾನ, ಮಾಂತೇಶ ಉಪ್ಪಿನ, ರೆಬ್ಬನ್ನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net