ಹಳ್ಳಿಕೇರಿ ಚೆಕ್‌ಪೋಸ್ಟ್‌ ನಲ್ಲಿ 2.36 ಲಕ್ಷ ರೂ. ವಶ

Police Siezed un accounted money.
Published on

ಮುಂಡರಗಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ಹಣವನ್ನು ತಾಲೂಕಿನ ಹಳ್ಳಿಕೇರಿ ಚೆಕ್‌ಪೋಸ್ಟ್‌ ನಲ್ಲಿ ಅಧಿಕಾರಿಗಳ ತಂಡ ಸೋಮವಾರ ವಶ ಪಡಿಸಿಕೊಳ್ಳಲಾಗಿದೆ..

ಬೈಕ್‌ನಲ್ಲಿ ಕೊಪ್ಪಳ ಭಾಗದಿಂದ ಹುಲಕೋಟಿಗೆ ಸಾಗಿಸುತ್ತಿದ್ದ 1.50 ಲಕ್ಷ ರೂ., ಇನ್ನೊಂದು ಪ್ರಕರಣದಲ್ಲಿ ಕಾರಿನಲ್ಲಿ ಬನ್ನಿಕೊಪ್ಪದಿಂದ ಗದಗಿಗೆ ಸಾಗಿಸುತ್ತಿದ್ದ 86 ಸಾವಿರ ರೂ.ಗಳನ್ನು ಜಪ್ತಿ ಮಾಡಲಾಗಿದೆ.

ಒಟ್ಟು 2.36 ಲಕ್ಷ ರೂ.ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸಿಪಿಐ ವೀರಣ್ಣ ಹಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಶಪಡಿಸಿಕೊಂಡ ನಗದನ್ನು ತಹಸೀಲ್ದಾರ್ ಹಾಗೂ ಸಿಇಒ ಅವರ ಉಪಖಜಾನೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ.

ಚೆಕ್‌ಪೋಸ್ಟ್‌ ನಲ್ಲಿ 12 ಲೀಟರ್ ಮದ್ಯ ವಶ

ಮುಂಡರಗಿ ತಾಲೂಕಿನ ಜಂತ್ಲಿಶಿರೂರ ಗ್ರಾಮದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಂದಾಜು 5,594 ರೂ. ಮೌಲ್ಯದ 12 ಲೀಟರ್ ಮದ್ಯವನ್ನು ಪಿಎಸ್‌ಐ ಅಪ್ಪಣ್ಣ ಐಗಳಿ ನೇತೃತ್ವದ ತಂಡ ಸೋಮವಾರ ದಾಳಿ ನಡೆಸಿ ವಶಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net