2.35 ಲಕ್ಷ ರೂ. ಮೌಲ್ಯದ ಕೆಟರಿಂಗ್ ಸಾಮಗ್ರಿ ಕಳವು

crime
Published on

ಹುಬ್ಬಳ್ಳಿ: ಗದಗ ರಸ್ತೆಯ ವಿನೋಭಾನಗರದಲ್ಲಿಟ್ಟಿದ್ದ 2.35 ಲಕ್ಷ ಮೌಲ್ಯದ ಶಾಮಿಯಾನ ಮತ್ತು ಕೆಟರಿಂಗ್ ವಸ್ತುಗಳು ಕಳವಾದ ಘಟನೆ ನಡೆದಿದೆ.
ನಗರದ ಮಾರ್ಷಲ್ ಚೀಮಕುಟ್ಟಿ ಎಂಬುವರಿಗೆ ಸೇರಿದ ವಸ್ತುಗಳು ಕಳವಾಗಿದೆ. 2 ಲಕ್ಷ ರೂ. ಮೌಲ್ಯದ 7 ಅಲ್ಯೂಮಿನಿಯಂ ಡಬರಿ, 10 ಸಾವಿರ ರೂ. ಮೌಲ್ಯದ 200 ತಟ್ಟೆ, 15 ಸಾವಿರ ರೂ. ಮೌಲ್ಯದ 10 ಬಕೆಟ್, ಸ್ಟೀಲ್ ಟೇಬಲ್, ಪ್ಲಾಸ್ಟಿಕ್ ಚೇರ್ ಕಳವಾಗಿವೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net