2.30 ಲಕ್ಷ ರೂ. ಮೌಲ್ಯದ ಅಕ್ಕಿ ವಶಕ್ಕೆ

jkd 10-3 cr
ಜಮಖಂಡಿ ತಾಲೂಕಿನ ಕುಂಚನೂರು ಗ್ರಾಮದ ಶೆಡ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ಮೂಟೆಗಳನ್ನು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
Published on

ಜಮಖಂಡಿ: ನಗರದ ಕುಂಚನೂರು ಗ್ರಾಮದ ಶೆಡ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಮೂಟೆಗಳನ್ನು ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಗ್ರಾಮದ 115/6 ಸರ್ವೆ ನಂಬರಿನ ಜಮೀನಿನಲ್ಲಿನ ಶೆಡ್‌ನಲ್ಲಿ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ಮಾರಾಟಮಾಡಲು ಬೇರೆಡೆ ಸಾಗಿಸುತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 134 ಗೋಣಿ ಚೀಲಗಳಲ್ಲಿ 50 ಕೆಜಿ ಅಕ್ಕಿಯಂತೆ ಒಟ್ಟು 2,32,512 ರೂಗಳ ಮೌಲ್ಯದ ಅಕ್ಕಿ ವಶಪಡಿಸಿಕೊಂಡಿದ್ದಾರೆ.

ಆಹಾರ ನಿರೀಕ್ಷಕರಾದ ಆನಂದ ರಾಥೋಡ, ಆಡಳಿತಾಧಿಕಾರಿ ರವಿ ಬಂಟನ್ನವರ, ಶಿವಶರಣ ಮಾಲಗರ, ಪೊಲೀಸ್ ಸಿಬ್ಬಂದಿ ಎಸ್.ಬಿ. ಸನಗೌಡರ, ಎಸ್.ಬಿ. ಬಿರಾದಾರ ಇದ್ದರು.

ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net