

ತಿ.ನರಸೀಪುರ: ಹಾಲಿನ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ರೈತರದ್ದು. ಗುಣಮಟ್ಟ ಉತ್ತಮವಾಗಿದ್ದಲ್ಲಿ ಉತ್ಪಾದಕರಿಗೆ ಉತ್ತಮ ಬೆಲೆ ಸಿಗಲಿದೆ ಎಂದು ಕೊಳತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಕುಮಾರ್ ಹೇಳಿದರು.
ತಾಲೂಕಿನ ಕೊಳತ್ತೂರು ಗ್ರಾಮದಲ್ಲಿರುವ ಸಂಘದಲ್ಲಿ ಇತ್ತೀಚೆಗೆ ನಡೆದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಂಘಕ್ಕೆ 2,21,000 ರೂ.ನಿವ್ವಳ ಲಾಭ ಬಂದಿದೆ. ರೈತರಿಗೆ 93,770 ರೂ.ಬೋನಸ್ ನೀಡಲಾಗಿದೆ. ಗುಣಮಟ್ಟದ ಹಾಲು ನೀಡಿದರೆ ಇನ್ನು ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದರು.
ಡೇರಿಗೆ ಹೆಚ್ಚಿನ ಹಾಲು ಪೂರೈಸಿದ ಜಯಮ್ಮ ಮಹಾದೇವಯ್ಯ, ಕೆ.ಶಂಕರ್, ಗೀತಾ ಶಾಂತರಾಜು, ಮಹದೇವ ಅವರಿಗೆ ಬಹುಮಾನ ವಿತರಿಸಲಾಯಿತು. ವಿಸ್ತರಣಾಧಿಕಾರಿ ಅನಿತಾ, ಸಂಘದ ಉಪಾಧ್ಯಕ್ಷ ಕಾಳಯ್ಯ, ನಿರ್ದೇಶಕರಾದ ಕೆ.ಶಂಕರ್, ಬಿ.ಲೋಕೇಶ್, ತಿಮ್ಮರಾಯ ಗೌಡ, ಮಹದೇವ, ಕೃಷ್ಣ, ರತ್ನಮ್ಮ ಸೋಮಣ್ಣ, ರತ್ನಮ್ಮ ಮಹದೇವಯ್ಯ, ನಿಂಗರಾಜು, ಪದ್ಮಾ, ಕೆ.ಎಸ್. ಮಹದೇವ, ಮುಖ್ಯ ಕಾರ್ಯನಿರ್ವಣಾಧಿಕಾರಿ ಸಿದ್ದರಾಜು, ಹಾಲು ಪರೀಕ್ಷಕ ಕೆ.ಎಸ್.ಧನರಾಜ್, ಕೆ.ಎನ್.ಗೋವಿಂದ, ಎಂ. ಚಂದನ್, ಗ್ರಾಪಂ ಅಧ್ಯಕ್ಷ ರವಿ, ವಕೀಲ ವೀರಭದ್ರ, ಮಾಜಿ ನಿರ್ದೇಶಕ ಸೋಮಣ್ಣ, ಮಾಜಿ ಸದಸ್ಯ ಸ್ವಾಮಿ, ಮುಖಂಡರಾದ ನಾಗೇಗೌಡ, ಕೆಂಪೇಗೌಡ ಇತರರಿದ್ದರು.