2.21 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

26.ktal.01
ಕವಿತಾಳ ಪಪಂ ಸಭಾಂಗಣದಲ್ಲಿ ಬುಧವಾರ ಬಜೆಟ್ ಮಂಡನೆ ಸಭೆ ನಡೆಯಿತು. ಅಧ್ಯಕ್ಷೆ ಕಾಸಿಂಬೀ ಚಾಂದ್‌ಪಾಷಾ, ಉಪಾಧ್ಯಕ್ಷೆ ಎಲೀಜಾ ಒ., ಮುಖ್ಯಧಿಕಾರಿ ಜಗನ್ನಾಥ ದೇಸಾಯಿ ಕುಲ್ಕರ್ಣಿ, ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ರಮೇಶ ಇತರರಿದ್ದರು.
Published on

ಕವಿತಾಳ: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಕಾಸಿಂಬೀ ಚಾಂದ್‌ಪಾಷಾ ಅವರು 2025-26ನೇ ಸಾಲಿನ 2.21 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.

ನಿರೀಕ್ಷಿತ ಆದಾಯ 5,49,56,450 ರೂ.ಇದ್ದು ಇದರಲ್ಲಿ ನಿರೀಕ್ಷಿತ ಖರ್ಚು 5,47,35,450 ರೂ. ಆಗಲಿದ್ದು, 2.21 ಲಕ್ಷ ರೂ. ಉಳಿತಾಯವಾಗಲಿದೆ ಎಂದು ಮುಖ್ಯಧಿಕಾರಿ ಜಗನ್ನಾಥ ದೇಸಾಯಿ ಕುಲ್ಕರ್ಣಿ ತಿಳಿಸಿದರು. ಅಧ್ಯಕ್ಷೆ ಕಾಸಿಂಬೀ ಮಾತನಾಡಿ, ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆಯಾಗಬಾರದು.

ಪ್ರತಿ ವಾರ್ಡ್‌ನಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿದೆ. ಈ ಕುರಿತು ಪರಿಶೀಲಿಸಿ ಶುದ್ಧ ನೀರು ಸರಬರಾಜಿಗೆ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ರಾಘವೇಂದ್ರ ಶೆಟ್ಟಿ ಮಾತನಾಡಿ, ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗುತ್ತಿದೆ. ಮುಖ್ಯವಾಗಿ ಜಾತ್ರೆ ಸಮಯದಲ್ಲಿ ಜಲ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಬೇಕು. ಎಲ್ಲ ಬಡಾವಣೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. ಪಪಂ ಸಿಬ್ಬಂದಿ ಸರಿಯಾಗಿ ಕೆಲಸ ಮಾಡಬೇಕು ಎಂದರು.

ಉಪಾಧ್ಯಕ್ಷೆ ಎಲೀಜಾ ಒ., ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ರಮೇಶ, ಲಾಳೆಸಾಬ್ ನಾಯಕ, ಯಲ್ಲಪ್ಪ ಮಾಡಗೇರ, ಮೌನೇಶ, ರುಕ್ಮುದ್ದೀನ್, ಪಾರ್ವತಿ, ಅಂಬಮ್ಮ, ಹುಲುಗಮ್ಮ, ರಾಜೇಶ್ವರಿ, ಸಿಬ್ಬಂದಿ ರಾಘವೇಂದ್ರ ಕುಲ್ಕರ್ಣಿ, ರಾಮಪ್ಪ, ಪ್ರಶಾಂತ, ಗೋಕುಲ, ಗೌಸಿಯಾ, ವೆಂಕಟೇಶ ಇತರರಿದ್ದರು.

ಬಜೆಟ್ ಮಂಡನೆಗೂ ಮುನ್ನ ಪಪಂ ಎಲ್ಲ ಸದಸ್ಯರಿಗೆ ನೋಟಿಸ್ ನೀಡಿ ಮಾಹಿತಿ ನೀಡಬೇಕಿತ್ತು. ಆದರೆ, ಮುಖ್ಯಾಧಿಕಾರಿಗಳು ಪಾಲನೆ ಮಾಡಿಲ್ಲ. ತರಾತುರಿಯಲ್ಲಿ ಬಜೆಟ್ ಸಭೆ ಕರೆದು ಉಳಿತಾಯ ಮಂಡನೆ ಮಾಡಿದ್ದು, ಹಲವು ಅನುಮಾನಗಳನ್ನು ಹುಟ್ಟಿಸಿದೆ ಎಂಬ ಆರೋಪಗಳು ಕೇಳಿಬಂದವು

ಸದಸ್ಯರಿಗೆ ನೋಟಿಸ್ ನೀಡಿಲ್ಲ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net