

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಮುಂಚೂಣಿ ಸಂಸ್ಥೆಯಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಕಂಪನಿ (ಎಚ್‌ಎಎಲ್) ಮುಂದಿನ 7 ವರ್ಷಕ್ಕೆ ಆಗುವಷ್ಟು ಆರ್ಡರ್ ಹೊಂದಿದ್ದು, ಪ್ರತೀ ವರ್ಷ ಒಂದು ಲಕ್ಷ ಕೋಟಿ ರೂ. ವಿಸ್ತರಿಸುವ ವಿಶ್ವಾಸವನ್ನು ಸಂಸ್ಥೆಯ ಸಿಎಂಡಿ ಡಿ.ಕೆ.ಸುನೀಲ್ ಹೇಳಿದ್ದಾರೆ.
ಪ್ರಸ್ತುತ ಸಂಸ್ಥೆ 1.2 ಲಕ್ಷ ಕೋಟಿ ರೂ. ಮೊತ್ತದಷ್ಟು ಆರ್ಡರ್ ಹೊಂದಿದೆ. ಮುಂದಿನ ಕೆಲವೇ ತಿಂಗಳಲ್ಲಿ ಇನ್ನೂ 1.2 ಲಕ್ಷ ಕೋಟಿ ರೂ. ಮೊತ್ತದ ಆರ್ಡರ್ ಸಿಗಲಿದ್ದು, ಈ ಒಟ್ಟು ಮೊತ್ತವು ಸಂಸ್ಥೆಯು 2030ರ ವರೆಗೆ ನಿರಂತರವಾಗಿ ಉತ್ಪಾದನೆ ಹಾಗೂ ವಹಿವಾಟು ನಡೆಸಲು ಸಾಮರ್ಥ್ಯ ಹೊಂದಿದೆ ಎಂದು ಅವರು ಏರೋ ಇಂಡಿಯಾ ನೇಪಥ್ಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಈ ವರ್ಷಾಂತ್ಯದ ವೇಳೆ ತೇಜಸ್ ಎಂಕೆ-1ಎ ಯುದ್ಧವಿಮಾನಗಳು ವಾಯುಪಡೆಗೆ ಹಸ್ತಾಂತರವಾಗಲಿದೆ. ಹಾಲಿ ಏರೋ ಇಂಡಿಯಾದಲ್ಲಿ 4 ಏರ್ ಕ್ರಾಫ್ಟ್ ಹಾರಾಟ ನಡೆಸಿದ್ದು, ಉಳಿದವು ಸೇರಿ 12 ಯುದ್ಧವಿಮಾನಗಳು ತಯಾರಿಯಾಗಿ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಜನರಲ್ ಇಲೆಕ್ಟ್ರಿಕ್ಸ್ (ಜಿಇ) ಕಂಪನಿ ಇಂಜಿನ್ ಪೂರೈಕೆ ನಿಧಾನ ಮಾಡಿದ್ದರಿಂದ ಯೋಜನೆ 1 ವರ್ಷ ತಡವಾಗಿದೆ. ಈಗಾಗಲೇ 4 ಇಂಜಿನಿ ಪೂರೈಕೆಯಾಗಿದ್ದು, ಉಳಿದವು ಬೇಗನೆ ಸಿಗಲಿರುವುದರಿಂದ ಎಲ್ಲ 12 ಏರ್ ಕ್ರಾಫ್ಟ್ ವಾಯುಪಡೆ ಸೇರ್ಪಡೆಯಾಗಲಿದೆ. ಒಟ್ಟು 83 ಎಂಕೆ-1ಎ ಏರ್‌ಕ್ರ್‌ಟಾಗಳನ್ನು ಮೂರೂವರೆ ವರ್ಷದಲ್ಲಿ ಪೂರೈಸಲು ಸಂಸ್ಥೆ ಬದ್ಧವಾಗಿದೆ ಎಂದರು.
ಸಂಸ್ಥೆಯು ವಾರ್ಷಿಕ 24 ಎಲ್‌ಸಿಎ ಎಂಕೆ-1ಎ ಏರ್ ಕ್ರಾಫ್ಟ್ ತಯಾರಿಸುವ ಸಾಮರ್ಥ್ಯ ಹೊಂದಿದ್ದು, ಇದೇ ವರ್ಷ ಹೆಚ್ಚುವರಿಯಾಗಿ 97 ಏರ್ ಕ್ರಾಫ್ಟ್ ತಯಾರಿಕೆಗೆ ಹೊಸದಾಗಿ ಆರ್ಡರ್ ಸಿಗುವ ಸಾಧ್ಯತೆ ಇದೆ. ಜತೆಗೆ 156 ಸಂಖ್ಯೆಯಷ್ಟು ಹಗುರ ಸಮರ ಹೆಲಿಕಾಪ್ಟರ್ (ಎಲ್‌ಸಿಎಚ್) ‘ಪ್ರಚಂಡ’ ತಯಾರಿಕೆಗೆ ಸಂಸ್ಥೆ ಮುಂದಾಗಿದೆ ಎಂದು ಸ್ಪಷ್ಟಪಡಿಸಿದರು.
ದೇಶದಲ್ಲೇ ಇಂಜಿನ್ ತಯಾರಿಕೆಗೆ ಚಿಂತನೆ:
ಯುದ್ಧವಿಮಾನಗಳ ತಯಾರಿಕೆಯಲ್ಲಿ ಇಂಜಿನ್‌ಗಳು ಬಹು ಮುಖ್ಯ ಪಾತ್ರ ವಹಿಸಲಿದ್ದು, ತೇಜಸ್ ಏರ್ ಕ್ರಾಫ್ಟ್ನ ಎರಡು ಮಾದರಿಗೆ ಜಿಇ ಕಂಪನಿಯನ್ನೇ ಅವಲಂಬಿಸಲಾಗಿದೆ. 5ನೇ ಪೀಳಿಗೆಯ ಯುದ್ಧವಿಮಾನಗಳಿಗೆ ಎಫ್ 414 ಇಂಜಿನ್‌ಗಳನ್ನು ಪಡೆಯಲು ಜಿಇ ಕಂಪನಿಯೊಂದಿಗೆ ಚರ್ಚೆ ನಡೆದಿದೆ. ಈ ನಿಟ್ಟಿನಲ್ಲಿ ಮುಂದಿನ ತಿಂಗಳ ಬಳಿಕ ಅಮೆರಿಕದ ನಿಯೋಗವು ಭಾರತಕ್ಕೆ ಆಗಮಿಸಲಿದ್ದು, ಮಾತುಕಡೆ ನಡೆಯಲಿದೆ. ಜಿಇ ಇಂಜಿನ್‌ಗಳನ್ನು ಭಾರತದಲ್ಲೇ ತಯಾರಿಸಲು ಅವಕಾಶ ಸಿಕ್ಕಲ್ಲಿ ಜಾಗತಿಕ ಏರೋಸ್ಪೇಸ್ ಕ್ಷೇತ್ರದಲ್ಲಿ ದೇಶ ಸ್ಪರ್ಧೆ ಮಾಡಲು ಸಾಧ್ಯವಾಗಲಿದೆ ಎಂದು ಡಿ.ಕೆ.ಸುನೀಲ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಚ್‌ಎಎಲ್ ಬೆಂಗಳೂರು ಘಟಕದ ಸಿಇಒ ಎಸ್.ಜಯಕೃಷ್ಣನ್, ಹಿರಿಯ ಅಧಿಕಾರಿಗಳಾದ ಕೆ.ರವಿ, ಎಂ.ಸತ್ಯನಾರಾಯಣ ಉಪಸ್ಥಿತರಿದ್ದರು.
2034ರಿಂದ ಆಮ್ಕ ಉತ್ಪಾದನೆ:
ತೇಜಸ್ ಎಂಕೆ - 1ಎ ಬಳಿಕ ‘ಆಮ್ಕ 5ಜಿ ಪ್ಲಸ್’ ಏರ್‌ಕ್ರ್‌ಟಾ ತಯಾರಿಕೆ ಸಂಬಂಧ ಎಡಿಎ ಸಂಸ್ಥೆ ಈಗಾಗಲೇ ವಿನ್ಯಾಸ ಪೂರ್ಣಗೊಳಿಸಿ ಪ್ರೊಟೋಟೈಪ್ ಮಾದರಿ ತಯಾರಿಕೆಯತ್ತ ದೃಷ್ಟಿ ಹರಿಸಿದೆ. ಸರ್ಕಾರ ಹಸಿರು ನಿಶಾನೆ ತೋರಿಸಿರುವ ಕಾರಣ 2034ರಿಂದ ಉತ್ಪಾದನೆ ಸಾಧ್ಯವಾಗಲಿದೆ. ಇದರಿಂದಲೂ ಕೂಡ ಸಂಸ್ಥೆಯು ಭವಿಷ್ಯದಲ್ಲಿ ಹೆಚ್ಚಿನ ಆರ್ಡರ್ ಪಡೆಯಲು ಸಾಧ್ಯವಾಗಲಿದೆ. ಜತೆಗೆ ಆಫ್ರಿಕಾ ದೇಶಗಳು ಹಾಗೂ ದಕ್ಷಿಣ ಅಮೆರಿಕ ರಾಷ್ಟ್ರಗಳಿಗೆ ಸಂಸ್ಥೆಯ ಉತ್ಪನ್ನಗಳನ್ನು ರ್ತು ಮಾಡಲು ಹೆಚ್ಚು ಅವಕಾಶವಿದ್ದು, ಮಾರುಕಟ್ಟೆ ವಿಸ್ತರಣೆಗೆ ಗಮಹ ಹರಿಸಲಾಗಿದೆ ಎಂದು ಎಚ್‌ಎಎಲ್ ಸಿಎಂಡಿ ತಿಳಿಸಿದರು.