2.19 ಲಕ್ಷ ರೂ. ಮೌಲ್ಯದ ಎಂಡಿಎಂಎ ಜಪ್ತಿ

crime
Published on

ಹುಬ್ಬಳ್ಳಿ: ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ನಾಲ್ವರು ವಿದ್ಯಾರ್ಥಿಗಳು ಸೇರಿ 6 ಜನರನ್ನು ಇಲ್ಲಿಯ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 2.19 ಲಕ್ಷ ರೂ. ಮೌಲ್ಯದ 43.08 ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.

ಹಾವೇರಿ ಮೂಲದ ಶಮಿ ಎಂ., ಹುಬ್ಬಳ್ಳಿಯ ಮಹಮ್ಮದ್‌ಸೋಪಿಯಾನ್, ಕಪಿಲ್ ಎಲ್., ಅತಿಕ್‌ಅಹ್ಮದ್ ಹಾಗೂ ಮೆಕ್ಯಾನಿಕ್ ಶಾಮ್ ಜಿ., ಖಾಸಗಿ ಕಂಪನಿ ನೌಕರ ಬಾಪುಸಾಬ್ ಎಸ್. ಎಂಬುವವರನ್ನು ಬಂಧಿಸಲಾಗಿದೆ.

ಅವರಿಂದ 6 ಮೊಬೈಲ್ ಫೋನ್, 2.19 ಲಕ್ಷ ರೂ. ಮೌಲ್ಯದ 43.08 ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.

ಕಲ್ಯಾಣನಗರದ ಗೋಲ್ಡನ್‌ಸ್ಟಾರ್ ಅಪಾರ್ಟ್‌ಮೆಂಟ್ ಎಫ್-2 ಕೊಠಡಿಯಲ್ಲಿ ಆರೋಪಿತರು ನಿಷೇದಿತ ಎಂಡಿಎಂಎ ಇಟ್ಟುಕೊಂಡು ಸೇವನೆ ಮಾಡುವ ಮೂಲಕ ಬೇರೆಯವರಿಗೆ ಮಾರಾಟ ಮಾಡುವುದರ ಖಚಿತ ಮಾಹಿತಿ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net