

ಹುಬ್ಬಳ್ಳಿ: ಅಧಿಕ ಬಡ್ಡಿ ಆಸೆಗೆ ಇಲ್ಲಿನ ಕಮರಿಪೇಟೆಯ ಯುವತಿಯೊಬ್ಬರು 2.15 ಲಕ್ಷ ರೂ. ಕಳೆದುಕೊಂಡ ಪ್ರಕರಣ ಸಿಇಎನ್ ಕ್ರೖೆಂ ಠಾಣೆಯಲ್ಲಿ ದಾಖಲಾಗಿದೆ.
ಯುವತಿಯ ಮೊಬೈಲ್ ಫೋನ್ಗೆ ಟೆಲಿಗ್ರಾಂ ಅಪ್ಲಿಕೇಷನ್ ಮೆಸೇಜ್ ನೋಡಿದ ಅಪರಿಚಿತರು, ಇದರಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಮೊದಲು 15 ಸಾವಿರ ರೂ. ಹಾಗೂ 50 ಸಾವಿರ ರೂ. ನಂತರ ಆನ್ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಇದನ್ನು ಮರಳಿ ಪಡೆಯಲು 1.50 ಲಕ್ಷ ರೂ. ಕಳುಹಿಸುವಂತೆ ಸಲಹೆ ನೀಡಿದ್ದಾರೆ. ಈ ಮಾತು ನಂಬಿದ ಯುವತಿ ನೆಫ್ಟ್ ಮೂಲಕ ವರ್ಗಾಯಿಸಿದ್ದಾರೆ. ಒಟ್ಟು 2.15 ಲಕ್ಷ ರೂ. ವರ್ಗಾಯಿಸಿಕೊಂಡ ಅಪರಿಚಿತರು, ಯುವತಿಗೆ ವಂಚಿಸಿದ್ದಾರೆ.