ಮಾರುತಿ ಸಹಕಾರಿ ಸಂಘಕ್ಕೆ 2.12 ಕೋಟಿ ರೂ. ಲಾಭ

27 BKL 2
Published on

ಭಟ್ಕಳ: ತಾಲೂಕಿನ ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ 23ನೇ ವಾರ್ಷಿಕ ಮಹಾಸಭೆಯು ಶಿರಾಲಿಯ ಶ್ರೀ ಮಾರುತಿ ದೇವಸ್ಥಾನದ ಸಭಾಗೃಹದಲ್ಲಿ ಇತ್ತೀಚೆಗೆ ಜರುಗಿತು.

ಸಂಘದ ಅಧ್ಯಕ್ಷ ಅಶೋಕ ಪೈ ಸಭೆ ಉದ್ಘಾಟಿಸಿ ಮಾತನಾಡಿ, ಸಂಘವು 73.69 ಕೋಟಿ ರೂ.ಗೂ ಮಿಕ್ಕಿ ಠೇವಣಿ ಸಂಗ್ರಹಿಸಿದೆ. ಸದಸ್ಯರಿಗೆ 66.60 ಕೋಟಿ ರೂ. ಸಾಲ ನೀಡಲಾಗಿದೆ. ಶೇ. 98.33 ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಸುಮಾರು 2.12 ಕೋಟಿ ರೂ.ಗೂ ಮಿಕ್ಕಿ ಲಾಭ ಗಳಿಸಿದ್ದು, ಈ ಬಾರಿ ಸದಸ್ಯರಿಗೆ ಶೇ.13 ರಷ್ಟು ಲಾಭಾಂಶ ನೀಡಲಾಗುವುದು. ಸಂಘದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸತತ 11 ವರ್ಷಗಳಿಂದ ಸಂಘವು ಎ ದರ್ಜೆ ಪಡೆದಿದೆ ಎಂದರು.

ಉಪಾಧ್ಯಕ್ಷ ಸುಬ್ರಾಯ ಕಾಮತ ಮಾತನಾಡಿ, ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಎಲ್ಲ ನಿರ್ದೇಶಕರು ಏಕ ಮನಸಿನಿಂದ ಸಲ್ಲಿಸಿದ ನಿಸ್ವಾರ್ಥ ಸೇವೆಯೇ ಸಂಘದ ಏಳಿಗೆಗೆ ಕಾರಣ ಎಂದರು.

ನಿರ್ದೇಶಕ ನರೇಂದ್ರ ನಾಯಕ ಮಾತನಾಡಿ, ನಮ್ಮ ಕ್ರಿಯಾಶೀಲ ಸಿಬ್ಬಂದಿ ಉತ್ತಮ ತ್ವರಿತ ಸೇವೆ ಸಲ್ಲಿಸುತ್ತಿದ್ದಾರೆ. ಸದಸ್ಯರಿಗೆ ಏನಾದರೂ ಅನುಕೂಲಗಳು ಬೇಕಿದ್ದಲ್ಲಿ ಆಡಳಿತ ಮಂಡಳಿಯ ಗಮನಕ್ಕೆ ತರುವಂತೆ ಮನವಿ ಮಾಡಿದರು.

ನಿರ್ದೇಶಕ ರವೀಂದ್ರ ಪ್ರಭು ಮಾತನಾಡಿದರು. ಹಿರಿಯ ಸದಸ್ಯರಾದ ಡಿ.ಜೆ. ಕಾಮತ, ನಾರಾಯಣ ಸರಾಫ್, ಗೋಪಾಲಕೃಷ್ಣ ಆಚಾರ್ಯ, ಶ್ರೀನಿವಾಸ ಮಹಾಲೆ, ಉಪನ್ಯಾಸಕ ಎ.ಎಂ. ಮುಲ್ಲಾ, ಮಂಜುನಾಥ ಪ್ರಭು ಸಲಹೆ ಸೂಚನೆ ನೀಡಿದರು.

ಸಂಘದ ಮುಖ ್ಯಕಾರ್ಯ ನಿರ್ವಾಹಕ ರಾಜೇಂದ್ರ ಶಾನಭಾಗ ವರದಿ ವಾಚಿಸಿದರು. ನಿರ್ದೇಶಕ ನಾಗೇಶ ಪೈ ಸ್ವಾಗತಿಸಿದರು. ಸಿಬ್ಬಂದಿ ಶ್ಯಾಮಸುಂದರ್ ಪ್ರಭು ಪ್ರಾರ್ಥಿಸಿದರು. ಭಟ್ಕಳ ಶಾಖೆಯ ಪ್ರಬಂಧಕ ಪ್ರಸನ್ನ ಪ್ರಭು ನಿರ್ವಹಿಸಿದರು. ವಾಮನ ಕಾಮತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net