19ರಿಂದ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ

ctd 00006
Published on

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಆಲದಮರದ ಮಾಳೇನಹಳ್ಳಿ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಏ.19ರಿಂದ ಏ.22ರವರೆಗೆ ನಡೆಯಲಿದೆ. 19ರ ರಾತ್ರಿ 9.30ರಿಂದ ಬಳಿಗಟ್ಟೆ,ಹಿರೇಕಬ್ಬಿಗೆರೆ ಮಜರೆಗೊಲ್ಲರಹಟ್ಟಿ,ಬ್ಯಾಲಹಾಳ್ ಗ್ರಾಮಸ್ಥರಿಂದ ಶ್ರೀಚೌಡೇಶ್ವರಿ ದೇವಿ ಮದುವ ಣಗಿತ್ತಿ ಶಾಸ್ತ್ರ ನಡೆಯಲಿದ್ದು,ಗಂಜಿಗಟ್ಟೆ ಆರ್.ಕೃಷ್ಣಮೂರ್ತಿ ಮತ್ತು ಸಂಗಡಿಗರಿಂದ ರಾತ್ರಿ 9.30 ರಿಂದ ಜಾನಪದ ಹಾಗೂ ಹಾಸ್ಯ ಕಾರ‌್ಯಕ್ರಮ ಏರ್ಪಡಿಸಲಾಗಿದೆ. 20ರಂದು ಬೆಳಗ್ಗೆ 6.30ಕ್ಕೆ ಉಚ್ಚಾಯ ರಥೋತ್ಸವ,ಮಧ್ಯಾಹ್ನ ಅನ್ನಸಂತರ್ಪಣೆ,ಮಧ್ಯಾಹ್ನ ಮೀ ಸಲು, ಕೋಲು ಮೇಳ ಪಾನಕಬಂಡಿ ಕಾರ್ಯಕ್ರಮಗಳು ಜರುಗಲಿವೆ.
21ರಂದು ಮಧ್ಯಾಹ್ನ 2ರಿಂದ ಪೂಜೆ,ಮಹಾಮಂಗಳಾರತಿ,ಸಂಜೆ 4ರಿಂದ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ ಹಾಗೂ ಮಾಳೇನಹಳ್ಳಿ ಗ್ರಾ ಮಸ್ಥರಿಂದ ಸಿಡಿ ಉತ್ಸವ ಜರುಗಲಿದೆ. 22ರಂದು ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಓಕಳಿ ಮತ್ತು ಮಹಾಮಂಗಳಾರತಿ ನೆರ ವೇರಲಿದೆ.
21ರ ಮಧ್ಯಾಹ್ನ 12ರಿಂದ ಸಂಜೆ 4 ರವರೆಗೆ ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು,ಸ ದಸ್ಯರು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ. ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಲಕ್ಷ್ಮೀಸಾಗರ ಮತ್ತು ವಿಜಾ ಪುರ ಮಾರ್ಗವಾಗಿ ಬಸ್ ಮತ್ತು ಆಟೊ ವ್ಯವಸ್ಥೆ ಇರುತ್ತದೆ ಎಂದು ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಚ್.ಬಸವರಾಜಪ್ಪ, ಉಪಾಧ್ಯಕ್ಷ ಕೆ.ಕಾಟಲಿಂಗಪ್ಪ, ಸಂಚಾಲಕ ಪೂಜಾರಿ ಚಿತ್ರಲಿಂಗಪ್ಪ, ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net