

ಚಿತ್ರದುರ್ಗ:ನಗರದ ಬಸವೇಶ್ವರ ವಧು ವರರ ಮಾಹಿತಿ ಕೇಂದ್ರದಿಂದ ಮೇ19ರಂದು 11 ಗಂಟೆಗೆ ಗಾಯತ್ರಿ ಕಲ್ಯಾಣ ಮಂಟಪ ದಲ್ಲಿ ರಾಜ್ಯ ಮಟ್ಟದ ಸರ್ವಧರ್ಮ ವಧು-ವರರ ಸಮಾವೇಶ ಏರ್ಪಡಿಸಲಾಗಿದೆ ಎಂದು ಕೇಂದ್ರದ ವ್ಯವಸ್ಥಾಪಕ ಜೆ.ಎಂ.ಜಂಬಯ್ಯ ತಿಳಿಸಿದ್ದಾರೆ. ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ,ಜಗದ್ಗುರು ಮರುಳಶಂಕರ ಗುರು ಪೀಠದ ಸಿದ್ಧಬಸವ ಕಬೀರ ಮ ಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್,ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜೆ.ಎಂ.ಜಂಬಯ್ಯ,ಸಂಚಾಲಕರು 9980658625 ಸಂಪರ್ಕಿಸಬಹುದಾಗಿದೆ.