ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಚಾಮರಾಜನಗರ, ಹರದನಹಳ್ಳಿ ಹಾಗೂ ಸಂತೇಮರಹಳ್ಳಿ ಉಪವಿಭಾಗಗಳ ವ್ಯಾಪ್ತಿಯಲ್ಲಿ ಜೂ.19 ರಂದು ಜನಸಂಪರ್ಕ ಸಭೆ ನಡೆಯಲಿದೆ.
ಜೂ.19ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಚಾಮರಾಜನಗರ ಉಪವಿಭಾಗ, ಮಧ್ಯಾಹ್ನ 12.30 ರಿಂದ 1.30 ಗಂಟೆಯವರೆಗೆ ಹರದನಹಳ್ಳಿ ಉಪವಿಭಾಗ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 4 ಗಂಟೆಯವರೆಗೆ ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ನಿಗದಿಯಾಗಿದೆ. ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯುತ್ ಸಂಬಂಧಿತ ಕುಂದು ಕೊರತೆಗಳಿದ್ದಲ್ಲಿ ಸಭೆಗೆ ತಿಳಿಸುವಂತೆ ನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.