

ಶಿಕಾರಿಪುರ: ಕರೊನಾ ನಿಮೂಲನೆ ಮತ್ತು ಲೋಕ ಕಲ್ಯಾಣಾರ್ಥ ಅ.19ರ ಬೆಳಗ್ಗೆ ಮಂಗಲಭವನದಲ್ಲಿ ಮಹಾಮೃತ್ಯುಂಜಯ ಜಪ, ಹೋಮ, ನವಗ್ರಹ, ಮಹಾಗಣಪತಿ, ಶ್ರೀ ದುರ್ಗಾ ಹೋಮ ಮತ್ತು ವಿವಿಧ ಧಾರ್ವಿುಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಎಲ್ಲ ಮಠಾಧೀಶರು ಸಾನ್ನಿಧ್ಯ ವಹಿಸುವರು ಎಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎನ್.ವಿ.ಈರೇಶ್ ತಿಳಿಸಿದರು.
ವೀರಶೈವ ಸಮಾಜದ ಜತೆಗೆ ಎಲ್ಲ ಸಮಾಜಗಳ ಸಹಕಾರ ಪಡೆದು ಧಾರ್ವಿುಕ ಕಾರ್ಯಕ್ರಮ ನಡೆಸಲಾಗುವುದು. ಕರೊನಾ ಬಿಡದಂತೆ ಕಾಡುತ್ತಿದೆ. ಈ ವಿಷಾಣುವಿನಿಂದ ಕಾಪಾಡಲು ಮಹಾ ಮೃತ್ಯುಂಜಯ ಜಪ ಮತ್ತು ಹೋಮ ಹವನ, ಸರ್ವ ರಕ್ಷಕನಾದ ಶ್ರೀ ಧನ್ವಂತರಿ ಹೋಮ ನಡೆಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಧಾರ್ವಿುಕ ಕಾರ್ಯಕ್ರಮ ಬಳಿಕ ರಾಜ್ಯ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ನೂತನ ಅಧ್ಯಕ್ಷೆ ಬಿ.ವೈ.ಅರುಣಾದೇವಿ ಅವರನ್ನು ಸನ್ಮಾನಿಸಲಾಗುವದು. ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್.ವಿ.ಈರೇಶ್ ಅಧ್ಯಕ್ಷತೆ ವಹಿಸುರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ವೀರಶೈವ ಮಹಾಸಭಾ ಮುಖಂಡ ಡಾ. ಬಿ.ಡಿ.ಭೂಕಾಂತ್, ಜಿಲ್ಲಾ ಕಾರ್ಯದರ್ಶಿಗಳಾದ ಕೊಟ್ರೇಶ್ವರಪ್ಪ, ಕುಮಾರ ಸ್ವಾಮಿ ಹಿರೇಮಠ. ವೀರಶೈವ ನೌಕರರ ಸಂಘದ ಅಧ್ಯಕ್ಷ ಚನ್ನೇಶಪ್ಪ, ನಗರ ಘಟಕದ ಅಧ್ಯಕ್ಷ ಗಿರೀಶ್ ಧಾರವಾಡ, ಯುವಘಟಕದ ಅಧ್ಯಕ್ಷ ವೀರಣ್ಣ ಗೌಡ, ಮಹಿಳಾ ಘಟಕದ ಉಪಾದ್ಯಕ್ಷೆ ಶಾರದಮ್ಮ ಸುದ್ದಿಗೋಷ್ಠಿಯಲ್ಲಿದ್ದರು.