

ಬೆಂಗಳೂರು:ಮಂಜುನಾಥ್ ಎಜುಕೇಶನ್ ಟ್ರಸ್ಟ್ , ಹೃದಯ ವಾಹಿಸಿ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಂಘ ಅಂಡಮಾನ್ ಪೋರ್ಟ್ ಬ್ಲೇರ್ ಸಹಕಾರದಲ್ಲಿ ಜೂನ್.15 ರಂದು ಅಂಡಮಾನ್‌ನ ಎಸ್ ಆರ್ ಕ್ಯಾಸೆಲ್ ಸಭಾಂಗಣದಲ್ಲಿ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ 2024 ಸಮಾರಂಭ ಹಮ್ಮಿಕೊಂಡಿದೆ.
ಮೇಲಣ ಗವಿಮಠದ ಶ್ರೀ ಡಾ.ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಸಮ್ಮೇಳನ ನಡೆಯಲಿದೆ. ಬೆಳಗ್ಗೆ 10.30ಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಾ.ಎಸ್.ರಾಮನುಜ ಸಮಾರಂಭ ಉದ್ಘಾಟನೆ ಮಾಡಲಿದ್ದಾರೆ. ಕನ್ನಡ ಸಂಘ ಅಂಡಮಾನ್ ಸಂಸ್ಥೆ ಕಾರ್ಯದರ್ಶಿ ರೋನಿಕಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕಿ ಡಾ.ಅರ್ಚನಾ ಅಥಣಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ.
ಖ್ಯಾತ ವಾಗ್ಮಿ ಹಾಗೂ ಮೊಹಮ್ಮದ್ ರಫಿ ಪಾಷ,ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ , ಎಂ.ಡಿ.ಸ್ವಾಮಿ ಎಂಟರ್ ಪ್ರೈಸಸ್ ಮುಖ್ಯಸ್ಥ ಗೊ.ನಾ.ಸ್ವಾಮಿ, ಖ್ಯಾತ ಭರತನಾಟ್ಯ ಕಲಾವಿದೆ ಶುಭ ಧನಂಜಯ, ಸಮಿತಿಯ ಡಾ.ಶಿವಕುಮಾರ್ ಹ.ದೊ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಪ್ರಯುಕ್ತ ಬೆಳಗಿನಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಪ್ರಕಾಶ ಗ.ಖಾಡೆ ವಹಿಸಿಕೊಂಡಿದ್ದಾರೆ. ಪ್ರೊ.ಬಿಂಡಿಗನವೀಲೆ ಭಗವಾನ್, ಆರ್ೀ ಕಲ್ಕಟ್ಟ, ಆರತಿ ಸುರೇಶ್, ಮನು ಮಂಗಳೂರು ಕವಿಗೋಷ್ಠಿ ನಡೆಸಿಕೊಡಲಿದ್ದಾರೆ.
ಗುರು ಶುಭಧನಂಜಯ ಭರತನಾಟ್ಯ ರೂಪಕದ ನೃತ್ಯ ಸಂಯೋಜನೆಯ ಮಾಡಲಿದ್ದಾರೆ. ಕಲಾವಿದರಾದ ಅಂಜನ ಎಸ್, ಹರ್ಷಿತ ಎಚ್, ಮುದ್ರಾ ಧನಂಜಯ, ಮಾಯಾ ಧನಂಜಯ ,ಯಾಶಿಕಾ ಜೆ. ಕುಮಾರ್, ಕೃತಿಕಾ ಆರ್, ಕು.ಖುಷಿ ಭರತನಾಟ್ಯ ರೂಪಕ ಪ್ರದರ್ಶನ ನೀಡಲಿದ್ದಾರೆ.
ಎ.ಎಸ್. ಆರತಿ ಸುರೇಶ್ ರಚನೆಯ ಐತಿಹಾಸಿಕ ಕಿರುನಾಟಕವನ್ನು ಎಸ್.ತಿಲಕ್ ರಾಜ್ ನಿರ್ದೇಶನ ಮಾಡಿದ್ದು, ರಂಗ ಸಮಾಜದ ಕಲಾವಿದರು ಪ್ರದರ್ಶಿಸಲಿದ್ದಾರೆ. ಇದೇ ವೇಳೆ ಅಂತರಾಷ್ಟ್ರೀಯ ಜಾನಪದ ಗಾಯಕ ಗೋ.ನಾ.ಸ್ವಾಮೀ ರಸ ಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ತೊಗಲು ಗೊಂಬೆಯಾಟ ಪ್ರದರ್ಶನ ಮಾಡಲಿದ್ದಾರೆ.
ಇದೇ ವೇಳೆ ಸಮ್ಮೇಳನದ ಗೌರವ ಪ್ರಶಸ್ತಿ ಪುರಸ್ಕೃತರಾದ ಮೊಹಮ್ಮದ್ ರಫಿ ಪಾಷ ,ಡಾ.ಎಸ್.ರಾಮಾನುಜ, ಕೆ.ನಾಗರಾಜ್, ಕು.ಅನು ಅನಂದ್ , ಡಾ.ಈ.ಆಂಜನೇಯ ರಾಯಚೂರು, ಡಾ.ಡಿ.ಎಸ್. ವಿಶ್ವನಾಥ್ , ಶುಭ ಧನಂಜಯ್, ಡಾ.ಶಿವಕುಮಾರ್ ಹ.ದೊ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.