ತ್ರೈಮಾಸಿಕ ಕಾಮಗಾರಿ ಎಫೆಕ್ಟ್: ಜು.19ರಂದು ಮಂಡ್ಯ ತಾಲೂಕಿನ ವಿವಿಧ ಗ್ರಾಮಗಳಿಗೆ ಕರೆಂಟ್ ಕಟ್

power cut1
Published on

ಮಂಡ್ಯ: ಜಿ.ಮಲ್ಲಿಗೆರೆ ಮತ್ತು ತೂಬಿನಕೆರೆ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆೆ ಹಮ್ಮಿಕೊಂಡಿರುವುದರಿಂದ ಜು.19ರಂದು ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ಜಿ.ಮಲ್ಲಿಗೆರೆ ವಿದ್ಯುತ್ ವಿತರಣಾ ಕೇಂದ್ರದ ಜಿ.ಮಲ್ಲಿಗೆರೆ, ಹೊನ್ನೆಮಡು, ಹುನಗನಹಳ್ಳಿ, ನಂಜೇನಹಳ್ಳಿ, ಮುತ್ತೆಗೆರೆ, ತಿಪ್ಪಾಪುರ, ಬುಂಡಾರೆಕೊಪ್ಪಲು, ಎಂ.ಹಟ್ನ, ಸಂಗಾಪುರ ಜವನಹಳ್ಳಿ, ಮಲ್ಲೇನಹಳ್ಳಿ, ಛತ್ರನಹಳ್ಳಿ, ಬಿಲ್ಲೇನಹಳ್ಳಿ, ಬಂಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ತೂಬಿನಕೆರೆ ವಿದ್ಯುತ್ ವಿತರಣಾ ಕೇಂದ್ರದ ತೂಬಿನಕೆರೆ, ತೂಬಿನಕೆರೆ ಕೈಗಾರಿಕೆ ಬಡಾವಣೆ, ಉರಮಾರಕಸಲಗೆರೆ, ಯಲಿಯೂರು, ಕಾಳೇನಹಳ್ಳಿ, ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ, ಸುಂಡಹಳಿ, ಪೀಹಳ್ಳಿ, ಕೊಡಿಯಾಲ, ಆಲಗೂಡು, ಮತ್ತು ಐ.ಪಿ ಮಾರ್ಗಗಳಾದ ಎ ಹುಲಿಕೆರೆ, ಬಿ.ಹುಲಿಕೆರೆ, ಹುಲ್ಲುಕೆರೆ ಕೊಪ್ಪಲು ಗ್ರಾಮಗಳಲ್ಲಿ ಅಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net