

ಕಲಬುರಗಿ: ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಬಳಿ ಇರುವ ಕನ್ನಡದ ಭವನದ ಆವರಣದಲ್ಲಿನ ಬಾಪುಗೌಡ ದರ್ಶನಾಪುರ ರಂಗ ಮಂದಿರದಲ್ಲಿ ನ್ಯೂ ಚೆನ್ನೆÊ ಶಾಪಿಂಗ್ ಮೇಳ ಹಮ್ಮಿಕೊಂಡಿದ್ದು, ಉತ್ಕೃಷ್ಟ ಗುಣಮಟ್ಟದ ಬ್ರಾಂಡೆಡ್ ಉಡುಪುಗಳು ೧೯೯ ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಆ.೧೪ರಂದು ಬಟ್ಟೆ ಮೇಳ ಆರಂಭವಾಗಿದ್ದು, ಸೆ.೮ರವರೆಗೆ ಮೇಳ ನಡೆಯಲಿದೆ. ಮಕ್ಕಳಿಂದ ದೊಡ್ಡವರವರೆಗೆ ಯಾವುದೇ ಬಟ್ಟೆ ತೆಗೆದುಕೊಂಡರೂ ೧೯೯ ರೂ. ಬೆಲೆ ನಿಗದಿ ಮಾಡಲಾಗಿದೆ. ಜಿನ್ಸ್ ಪ್ಯಾಂಟ್, ಕ್ಯಾಶುವಲ್ ಶರ್ಟ್, ಫಾರ್ಮಲ್ ಶರ್ಟ್, ಲಾಂಗ್ ಫ್ರಾಕ್, ಟೀಶರ್ಟ್, ಲಾಂಗ್ ಚೂಡಿದಾರ, ಫ್ಯಾನ್ಸಿ ವರ್ಕ್ ಸೀರೆ ಸೇರಿದಂತೆ ಎಲ್ಲ ರೀತಿಯ ಉಡುಪುಗಳು ೧೯೯ ರೂ.ನಲ್ಲೆ ಮಾರಾಟ ಮಾಡಲಾಗುತ್ತಿದೆ.
ಮೇಳದ ಮೊದಲದಿನವಾದ ಬುಧವಾರವೇ ನಗರದ ಗ್ರಾಹಕರ ಹರಿದು ಬಂದಿದ್ದು, ಅತ್ಯುತ್ತಮ ಗುಣಮಟ್ಟದ, ಬ್ರಾÈಂಡೆಡ್ ಬಟ್ಟೆಗಳನ್ನು ಖರೀದಿಸಿ, ಖುಷಿಯಿಂದ ಹೋಗುತ್ತಿರುವುದು ಕಂಡು ಬಂತು. ಮೇಳ ಸೆಪ್ಟೆಂಬರ್ ೮ರವರೆಗೆ ನಡೆಯಲಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಲಾಭ ಪಡೆಯಬೇಕು ಎಂದು ಆಯೋಜಕರು ಕೋರಿದ್ದಾರೆ.