196 ಹೊಸ ಪ್ರಕರಣ ಪತ್ತೆ

carona logo
Published on

ಧಾರವಾಡ: ಜಿಲ್ಲೆಯಲ್ಲಿ ಶನಿವಾರ 196 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 6 ಜನ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 5966ಕ್ಕೇರಿದೆ. ಈವರೆಗೆ 3242 ಜನರಿಗೆ ಗುಣವಾಗಿದೆ. 2531 ಪ್ರಕರಣಗಳು ಸಕ್ರಿಯವಾಗಿವೆ. 40 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 193 ಜನ ಮೃತಪಟ್ಟಿದ್ದಾರೆ.

ಭಾನುವಾರ ಪ್ರಕಟವಾದ ಪ್ರಯೋಗಾಲಯ ವರದಿಯಲ್ಲಿ ಹುಬ್ಬಳ್ಳಿಯಲ್ಲೇ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಶಹರ ಹಾಗೂ ಗ್ರಾಮಾಂತರ ಸೇರಿ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸೋಂಕಿತರು ಕಂಡುಬಂದಿದ್ದಾರೆ.

ಧಾರವಾಡ ಹಾಗೂ ತಾಲೂಕಿನ ಗ್ರಾಮಾಂತರ ಸೇರಿ 30 ಪ್ರದೇಶಗಳಲ್ಲಿ ಪ್ರಕರಣಗಳು ದೃಢಪಟ್ಟಿವೆ. ಕೆಲ ಪ್ರದೇಶಗಳಲ್ಲಿ ನಿತ್ಯವೂ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ಕಲಘಟಗಿ ತಾಲೂಕಿನ ದೊಮರಿಕೊಪ್ಪ, ದುಮ್ಮವಾಡ, ಮಿಶ್ರಿಕೋಟಿ, ಗಾಂಧಿನಗರ, ಗಜಾನನ ಹೋಟೆಲ್, ಅಣವೇಕರ್ ಪ್ಲಾಟ್, ಮುಕ್ಕಲ್ ಗ್ರಾಮ, ಗಂಬ್ಯಾಪುರ, ದೇವಿಕೊಪ್ಪ, ಹುಲಕೊಪ್ಪ; ನವಲಗುಂದ ತಾಲೂಕಿನ ಗೊಬ್ಬರಗುಂಪಿ, ನವಲಗುಂದ ಓಣಿ, ಅರೇಕುರಟ್ಟಿ, ಅಮರಗೋಳ; ಕುಂದಗೋಳ ತಾಲೂಕಿನ ಬಿಳೇಬಾಳ, ಹೀರೆಹರಕುಣಿ, ಗುರವಿನಹಳ್ಳಿ, ಕಾಳಿದಾಸನಗರ, ರಾಮನಕೊಪ್ಪದ ಮುತ್ಲಿ ಓಣಿ, ತರ್ಲಘಟ್ಟ, ಬರದ್ವಾಡ, ಕಳಸ ಗ್ರಾಮದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

ಅಕ್ಕಪಕ್ಕದ ಜಿಲ್ಲೆಗಳ ಐದಾರು ಪ್ರಕರಣಗಳು ಕಿಮ್ಸ್​ಗೆ ಬಂದಿವೆ.

ವಾರ್ತಾ ಕಚೇರಿ ಸೀಲ್​ಡೌನ್

ನಗರದ ವಾರ್ತಾ ಇಲಾಖೆ ಕಚೇರಿಯ ಒಬ್ಬ ಸಿಬ್ಬಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಭಾನುವಾರ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ 2 ದಿನಗಳ ಮಟ್ಟಿಗೆ ಸೀಲ್​ಡೌನ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net