ಶ್ರೀರಾಮಭಕ್ತರ ಮೇಲೆ ಕಾಂಗ್ರೆಸ್ ದೌರ್ಜನ್ಯದ ವಿರುದ್ಧ ಬಿಜೆಪಿ ಪ್ರತಿಭಟನೆ

0bf141e5-7b0c-4978-baee-d16d77f34015--0001
Published on

ಚಿತ್ರದುರ್ಗ:ಬಂಧನಕ್ಕೆ ಒಳಗಾಗಿರುವ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಬಿಡುಗಡೆ ಮಾಡುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ಹಾಗೂ ರಾಜ್ಯದಲ್ಲಿ ಪೊಲೀಸರು ಶ್ರೀರಾಮಭಕ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಜಿಲ್ಲಾ ಬಿಜೆಪಿ ಕಾರ‌್ಯಕರ್ತರು ಬುಧವಾರ ನಗರದ ವೀರ ವನಿತೆ ಓಬವ್ವ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಸಮಾರಂಭ ಸಂದರ್ಭದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಶ್ರೀ ರಾಮಭಕ್ತರ ಮೇಲೆ ಧ್ವೇಷ ಸಾಧನೆಗೆ ಮುಂದಾಗಿದೆ. ಕರ ಸೇವಕರನ್ನು ಬಂಧಿಸುವ ಮೂಲಕ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಶ್ರೀರಾಮ ಭಕ್ತ ರ ಮೇಲೆ ಬಿದ್ದಿದ್ದೆ ರಾಕ್ಷಸ ಕೈ, 31 ವರ್ಷದ ಹಳೆಯ ಪ್ರಕರಣ ಕೆದಕಿದ ಕೈ ಸರ್ಕಾರ ಎಂದೆಲ್ಲ ಎಂದು ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕುಡಾ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್‌ಸಿದ್ದಾಪುರ, ನಗರಸಭೆ ಸದಸ್ಯ ಹರೀಶ್, ಶಿವಣ್ಣಾಚಾರ್,ಕೆ.ಮಲ್ಲಿಕಾರ್ಜುನ್,ನವೀನ್‌ಚಾಲುಕ್ಯ, ಶ್ಯಾಮಲಾ, ಡಾ.ಸಿದ್ದಾರ್ಥಗುಂಡಾರ್ಫಿ, ವೆಂಕಟೇಶ್‌ಯಾದವ್,ನಾಗರಾಜ್‌ಬೇದ್ರೆ,ನಂದಿ ನಾಗರಾಜ್,ಬಸಮ್ಮ ನಾನಾ ಪ್ರಮುಖರು ಪ್ರತಿಭ ಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net