

ಚಿತ್ರದುರ್ಗ:ಗುರುವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲೀಷ್ ಪೂರಕ ಪರೀಕ್ಷೆಗೆ 190 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇಂಗ್ಲೀಷ್ ಭಾಷಾ ವಿಷಯಕ್ಕೆ ನೋಂದಣಿಯಾಗಿದ್ದ 1656 ವಿದ್ಯಾರ್ಥಿಗಳ ಪೈಕಿ 1466 ವಿದ್ಯಾರ್ಥಿಗಳು ಹಾಜರಾಗಿದ್ದರು. ಜಿಲ್ಲೆಯ 9 ಕೆಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು,ಯಾವುದೇ ಡಿಬಾರ್ ಪ್ರಕರಣ ಇರುವುದಿಲ್ಲ.ಮೇ 3ರಂದು ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಷಯದ ಪರೀಕ್ಷೆ ನಡೆ ಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಪುಟ್ಟಸ್ವಾಮಿ ತಿಳಿಸಿದ್ದಾರೆ.