19 ನಿರ್ದೇಶಕರು ಅವಿರೋಧ ಆಯ್ಕೆ

Oplus_131072
Oplus_131072
Published on

ಯಳಂದೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕಕ್ಕೆ ವಿವಿಧ ಇಲಾಖೆಗಳಿಂದ 19 ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ಇವರಿಗೆ ಬುಧವಾರ ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯ ಆವರಣದಲ್ಲಿ ಸನ್ಮಾನ ಮಾಡಲಾಯಿತು.

ಒಟ್ಟು 29 ನಿರ್ದೇಶಕರು ತಾಲೂಕಿನಲ್ಲಿದ್ದು ಇದರಲ್ಲಿ 19 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೃಷಿ ಇಲಾಖೆಯಿಂದ ಎ. ವೆಂಕಟರಂಗಶೆಟ್ಟಿ, ಪಶುಪಾಲನಾ ಇಲಾಖೆಯಿಂದ ಬಸವರಾಜು, ತಾಲೂಕು ಖಜಾನೆಯಿಂದ ನವೀನ್, ಸರ್ವೇ ಇಲಾಖೆಯಿಂದ ಕೀರ್ತಿ ಪ್ರಸಾದ್, ರೇಷ್ಮೆ ಇಲಾಖೆಯಿಂದ ಎಸ್.ಪ್ರದೀಪ್‌ಕುಮಾರ್, ಬಿಸಿಎಂ ಇಲಾಖೆಯಿಂದ ಮಾನಸ, ಸಮಾಜ ಕಲ್ಯಾಣ ಇಲಾಖೆಯಿಂದ ಬಸವರಾಜೇಂದ್ರ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ವತಿಯಿಂದ ಮಹೇಶ್, ಪದವಿಪೂರ್ವ ಕಾಲೇಜಿನಿಂದ ಮಹೇಶ್, ಆರೋಗ್ಯ ಇಲಾಖೆಯಿಂದ ಶಶಿಕಲಾ, ಸಂಪಿಗಯ್ಯ, ಎಚ್.ಆರ್.ಭಾರತಿ, ಜಗದೀಶ್, ನ್ಯಾಯಾಂಗ ಇಲಾಖೆಯಿಂದ ನದೀಂಷರೀಫ್, ಲೋಕೋಪಯೋಗಿ ಇಲಾಖೆಯಿಂದ ಧರ್ಮೇಂದ್ರ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯಿಂದ ಆರೋಕ್ಯರಾಜ್, ತಾಪಂನಿಂದ ವೇಲು, ತೋಟಗಾರಿಕಾ ಇಲಾಖೆಯಿಂದ ಸುರೇಶ್, ಸಿಡಿಪಿಒ ಇಲಾಖೆಯ ವತಿಯಿಂದ ಸರಸ್ವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ. ವೈ.ಎಂ. ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ 29 ನಿರ್ದೇಶಕ ಸ್ಥಾನಗಳಿವೆ. ಇದರಲ್ಲಿ ಈಗಾಗಲೇ 19ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು 10 ನಿರ್ದೇಶಕರ ಸ್ಥಾನಕ್ಕೆ ಅ.28 ರಂದು ಚುನಾವಣೆ ನಡೆಯಲಿದ್ದು, ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಗೆ 4 ಜನ, ಪ್ರೌಢಶಾಲಾ ವಿಭಾಗಕ್ಕೆ ಒಬ್ಬರು, ಪಿಡಿಒಗಳಿಂದ ಒಂದು ಸ್ಥಾನಕ್ಕೆ ಕಂದಾಯ ಇಲಾಖೆಯ ಮೂರು ಸ್ಥಾನಗಳಿಗೆ ಹಾಗೂ ಅರಣ್ಯ ಇಲಾಖೆಯ ಒಂದು ನಿರ್ದೆಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಅಮ್ಮನಪುರ ಮಹೇಶ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಸೋಮಣ್ಣ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net