ಬೆಂಗಳೂರು| ನೇಪಾಳಿ ಯುವಕನ ಬರ್ಬರ ಹತ್ಯೆ; ಹಳೇ ವೈಷಮ್ಯ ಶಂಕೆ

Crime
Published on

ಬೆಂಗಳೂರು: ಹಳೇ ವೈಷಮ್ಯದ ಹಿನ್ನಲೆಯಲ್ಲಿ ನೇಪಾಳ ಮೂಲದ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕಸವನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಡೇವಿಡ್​ ಅಲಿಯಾವ್​ ಪಾರಸ್​(19) ಎಂದು ಗುರತಿಸಲಾಗಿದ್ದು, ಬೆಳ್ಳಂದೂರು ಬಳಿ ಇರುವ ಹರಳೂರಿನಲ್ಲಿ ಅವರ ಸಹೋದರನ ಜೊತೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಘಟನೆಯೂ ಜೂನ್​ 24 ಶನಿವಾರ ರಾತ್ರಿ 9:30ರ ಸುಮಾರಿಗೆ ನಡೆದಿದ್ದು, ಡೇವಿಡ್​ ಕಸವನಹಳ್ಳಿ ಬಳಿ ಇರುವ ಬೇಕರಿ ಒಂದರ ಬಳಿ ನಿಂತಿದ್ದರು. ಈ ವೇಳೆ ಆಗಮಿಸಿ ಮೂವರು ದುಷ್ಕರ್ಮಿಗಳು ಡೇವಿಡ್​ ಜೊತೆ ಜಗಳ ತೆಗೆದಿದ್ದು, ಅವರ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದನ್ನು ಗಮನಿಸಿದ ಸ್ಥಳೀಯರೊಬ್ಬರು ಅವರನ್ನು ಆಸ್ಪತ್ರೆಗೆ ಸೇರಿಸಿದ್ಧಾರೆ. ತೀವ್ರ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ಧಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು ಹಳೇ ವೈಷಮ್ಯದ ಹಿನ್ನಲೆಯಲ್ಲಿ ಡೇವಿಡ್​ನನ್ನು ಕೊಲೆ ಮಾಡಲಾಗಿದೆ. ಒಂದು ತಿಂಗಳ ಹಿಂದೆ ಆತ ಚೈನೀಸ್​ ರೆಸ್ಟೋರೆಂಟ್​ನಲ್ಲಿ ಅಸಿಸ್ಟೆಂಟ್​ ಕುಕ್​ ಆಘಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ, ಕಾರಣಾಂತರಗಳಿಂದ ಕೆಲಸ ಬಿಟ್ಟಿದ್ದ. ಹತ್ಯೆ ಮಾಡಿರುವ ಆರೋಪಿಗಳು ಡೇವಿಡ್​ ಈ ಹಿಂದೆ ಕೆಲಸ ಮಾಡುತ್ತಿದ್ದ ಹೋಟೆಲ್​ ಸಿಬ್ಬಂದಿ ಆಗಿರಬಹುದು ಎಂದು ಭಾವಿಸಿದ್ದೇವೆ.

ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಘಟನೆ ನಡೆದ ಪ್ರದೇಶದ ಸುತ್ತ ಇರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net