19 ಲಕ್ಷ ರೂ. ಕಳೆದುಕೊಂಡ ಯುವಕ

Published on

ಕಾಸರಗೋಡು: ಫೇಸ್‌ಬುಕ್ ಮೂಲಕ ಪರಿಚಯ ಮಾಡಿಕೊಂಡು ತಂಡವೊಂದು ಮುಳಿಯಾರಿನ ಯುವಕರೊಬ್ಬರಿಂದ ಬರೋಬ್ಬರಿ 19,36,000 ಲಕ್ಷ ರೂ. ಎಗರಿಸಿದೆ. ಮುಳಿಯಾರು ನಿವಾಸಿ ಕೆ.ಟಿ.ಶಿನೋಜ್ ಕುಮಾರ್(37) ದೂರಿನ ಮೇರೆಗೆ ಕಾಸರಗೋಡು ಕ್ರೈಂ ಬ್ರಾಂಚ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಫೇಸ್‌ಬುಕ್ ಮೆಸೆಂಜರ್ ಮೂಲಕ ಪರಿಚಯ ಮಾಡಿಕೊಂಡಿದ್ದ ತಂಡ ಪ್ಲಸ್-500, ಗ್ಲೋಬಲ್ ಸಿಎಸ್ ಎಂಬ ಕಂಪನಿಯ ಟ್ರೇಡಿಂಗ್ ನಡೆಸಿದಲ್ಲಿ ಹೆಚ್ಚಿನ ಲಾಭಾಂಶ ಲಭಿಸುವುದಾಗಿ ನಂಬಿಸಿದ್ದರು. 2025 ಫೆ.25ರಿಂದ ಮೇ 29ರವರೆಗೆ ವಿವಿಧ ದಿನಗಳಲ್ಲಿ 19,36,000 ರೂ. ಪಡೆದು ವಂಚಿಸಿರುವುದಾಗಿ ಶಿನೋಜ್‌ಕುಮಾರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ವಾಟ್ಸಾೃಪ್ ಮೂಲಕ ಲಿಂಕ್ ಕಳುಹಿಸಿಕೊಟ್ಟಿದ್ದು ನಂತರ ಟೆಲಿಗ್ರಾಂ ಮೂಲಕ ಮಾಹಿತಿ ಹಸ್ತಾಂತರಿಸಿದ್ದರು. ಆರೋಪಿಗಳು ಕಳುಹಿಸಿಕೊಟ್ಟಿರುವ ವಿವಿಧ ಬ್ಯಾಂಕ್ ಖಾತೆಗೆ ಹಣ ರವಾನಿಸಿಕೊಡಲಾಗಿದ್ದು, ನಂತರ ಯಾವುದೇ ಪ್ರತಿಕ್ರಿಯೆ ಲಭ್ಯವಾಗದ ಹಿನ್ನೆಲೆಯಲ್ಲಿ ವಂಚನೆಗೀಡಾಗಿರುವುದು ಮನವರಿಕೆಯಾಗಿರುವುದಾಗಿ ಶಿನೋಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net