19 ಅದ್ದೂರಿ ರಂಗಪಂಚಮಿ ಆಚರಣೆ

bbgd 16-1 meeting
ಬಸವನಬಾಗೇವಾಡಿ ರಂಗ ಪಂಚಮಿಯ ಆಚರಣೆಯ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.
Published on

ಬಸವನಬಾಗೇವಾಡಿ: ಪಟ್ಟಣದಲ್ಲಿ ರಂಗ ಪಂಚಮಿ ನಿಮಿತ್ತ ಮಾ. 19 ರಂದು ಅರ್ಥಪೂರ್ಣವಾಗಿ ಬಣ್ಣದ ಓಕುಳಿಯನ್ನು ಅತ್ಯಂತ ಅರ್ಥಪೂರ್ಣವಾಗಿ ನಿರ್ಧರಿಸಲಾಯಿತು.

ಪಟ್ಟಣದ ವಿರಕ್ತಮಠದಲ್ಲಿ ಬಸವೇಶ್ವರ ಸೇವಾ ಸಮಿತಿ ನೇತೃತ್ವದಲ್ಲಿ ಶನಿವಾರ ಸಂಜೆ ವಿವಿಧ ಪಕ್ಷದ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಹಾಗೂ ಪಟ್ಟಣದ ಗುರುಹಿರಿಯರು ರಂಗಪಂಚಮಿ ಆಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನಿಸಲಾಯಿತು.

ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಮೊದಲು 30 ವರ್ಷಗಳ ಹಿಂದೆ ಹೋಳಿ ಹಬ್ಬದ ಬಣ್ಣವನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ, ಹಬ್ಬದಲ್ಲಿ ಒಂದು ಸಣ್ಣ ಘಟನೆಯಿಂದಾಗಿ ಹೋಳಿ ಹಬ್ಬ ಆಚರಿಸಲು ಜನತೆ ಹಿಂದೇಟು ಹಾಕುತ್ತಿದ್ದರು. ಈಗ ಮತ್ತೆ ಎಲ್ಲ ಧರ್ಮಿಯರು ಸೇರಿ ಅತ್ಯಂತ ಸಡಗರ- ಸಂಭ್ರಮದಿಂದ ಆಚರಿಸುವಂತಾಗಬೇಕು. ಹಬ್ಬ ಹರಿದಿನಗಳು ನಶಿಸಿ ಹೋಗದಿರಲಿ ಎಂಬ ಸುದುದ್ದೇಶದಿಂದ ಈ ಬಾರಿ ಹಲಗೆ ಮೇಳವನ್ನೂ ಏರ್ಪಡಿಸಲಾಗಿತ್ತು. ಈಗ ಬುಧವಾರ ಬೆಳಗ್ಗೆ 10 ಗಂಟೆಗೆ ಬಸವೇಶ್ವರ ವೃತ್ತದಿಂದ ಬಣ್ಣದೋಕುಳಿ ನಡೆಯಲಿದೆ ಎಂದರು.

ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೋಂಡ ಮಾತನಾಡಿ, ಅಂದು ಹಲಗಿ ಹಾಗೂ ಹೋಳಿ ಹುಣ್ಣಿಗೆ ಹಾಡು ಹಾಡುತ್ತ ಟ್ರಾೃಕ್ಟರ್ ಹಾಗೂ ಎತ್ತಿನ ಬಂಡಿಯಲ್ಲಿ ಬಣ್ಣದ ಬ್ಯಾರಲ್‌ನಲ್ಲಿ ಬಣ್ಣ ತುಂಬಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸೋಣ ಎಂದರು.

ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವೇಶ್ವರ ವೃತ್ತದಿಂದ ಅಗಸಿ ಒಳಗಡೆಯಿಂದ ವಿವೇಕಾನಂದ ಗಲ್ಲಿ ಮಾರ್ಗವಾಗಿ ಪಟ್ಟಣಶೆಟ್ಟಿ ಓಣಿ ಮೂಲಕ ಮತ್ತೆ ಬಸವೇಶ್ವರ ವೃತ್ತಕ್ಕೆ ಆಗಮಿಸಲು ಸಭೆಯಲ್ಲಿ ಸೂಚಿಸಲಾಯಿತು.

ಸಂಗಮೇಶ ಓಲೇಕಾರ, ಶಂಕರಗೌಡ ಬಿರಾದಾರ, ಬಸಣ್ಣ ದೇಸಾಯಿ, ಅಶೋಕ ಹಾರಿವಾಳ, ವಿನೂತ್ ಕಲ್ಲೂರ, ಎಂ.ಜಿ . ಆದಿಗೊಂಡ. ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಅನೀಲ ಮುಳವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net