ಮೈಸೂರಿನಲ್ಲಿ 19.74 ಲಕ್ಷ ರೂ. ಆನ್‌ಲೈನ್ ವಂಚನೆ

cybe crime
Published on

ಮೈಸೂರು: ಆನ್‌ಲೈನ್ ವಂಚನೆಗೆ ಒಳಗಾಗಿರುವ ನಗರದ ಸಿದ್ದಾರ್ಥ ಬಡಾವಣೆ ನಿವಾಸಿ ಇಂದ್ರಮ್ಮ 19.74 ಲಕ್ಷ ರೂ. ಕಳೆದು ಕೊಂಡಿದ್ದಾರೆ.

ಟೆಲಿಗ್ರಾಂ ಸಂದೇಶದ ಮೂಲಕ ನಕಲಿ ಕಂಪನಿಯ ಪ್ರತಿನಿಧಿಯನ್ನು ಸಂಪರ್ಕಿಸಿದಾಗ ಆತ ಹಣ ಹೂಡಿಕೆಯಿಂದ ಲಾಭ ಗಳಿಸಬಹುದು ಎಂದು ಮಾಹಿತಿ ನೀಡಿದ. ಆತನ ಮಾತನ್ನು ನಂಬಿ ಗಂಟೆಗೆ ಶೇ. 20 ರಷ್ಟು ಲಾಭಗಳಿಸಬಹುದು ಎಂದು ನಂಬಿ ಹಂತ ಹಂತವಾಗಿ ಹಣ ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು, ವಾಪಾಸ್ ಹಣ ಬಾರದೇ ವಂಚನೆಯಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ.

ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net