ಷೇರು ಹೂಡಿಕೆ ಮಾಡಲು ನಂಬಿಸಿ 19.50 ಲಕ್ಷ ರೂ. ವಂಚನೆ

Fruad
Published on

ಮಂಗಳೂರು : ಷೇರುಗಳಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ವ್ಯಕ್ತಿಯೋರ್ವರಿಗೆ 19.50 ಲಕ್ಷ ರೂ. ವಂಚಿಸಿದ ಘಟನೆ ಸಂಭವಿಸಿದ್ದು ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆರೋಪಿ ಆಕಾಶ್ ವರ್ನಭಾನಿ ಎಂಬಾತ ಕಳುಸಿಹಿದ ಲಿಂಕ್‌ನ ಮೂಲಕ ವ್ಯಕ್ತಿಯೋರ್ವರು ‘568 ಐಘೆಈಐಅಘೆ ಖಇಓ ಔಉಅಈಉ್ಕ’ ವಾಟ್ಸ್ ಆ್ಯಪ್ ಗ್ರೂಪ್‌ಗೆ ಕಳೆದ ಎ.7ರಂದು ಸೇರ್ಪಡೆಗೊಂಡಿದ್ದರು. ಅನಂತರ ಆ ಗ್ರೂಪ್‌ನಲ್ಲಿ ಸಿಂಗ್ ಎಂಬಾತ ಹಣವನ್ನು ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ವಿಚಾರ ತಿಳಿಸಿದ. ಅದರಂತೆ ದೂರುದಾರರು ಎ.29ರಂದು 1 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಮತ್ತೆ ಮೇ 3ರಂದು 3 ಲಕ್ಷ ರೂ. ಮೊತ್ತ ವರ್ಗಾಯಿಸಿದರು. ಮೇ 10ರಂದು 1.50 ಲ.ರೂ., ಮೇ 17ರಂದು 4 ಲ.ರೂ. ಹೀಗೆ ಹಂತ ಹಂತವಾಗಿ 19.50 ಲ.ರೂ.ಗಳನ್ನು ವರ್ಗಾಯಿಸಿದರು. ಅನಂತರ ಹೂಡಿಕೆ ಮೊತ್ತವನ್ನು ವಾಪಸ್ ನೀಡುವಂತೆ ಕೇಳಿದಾಗ ಆರೋಪಿ ಅನೂಜ್ ಗುಪ್ತಾ ಎಂಬಾತ ಹೆಚ್ಚುವರಿಯಾಗಿ 7.88 ಲಕ್ಷ ರೂ.ಗಳನ್ನು ಪಾವತಿಸುವಂತೆ ಸೂಚಿಸಿದ. ಆಗ ತಾನು ಮೋಸ ಹೋಗಿರುವುದು ದೂರುದಾರರಿಗೆ ಗೊತ್ತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net