

ಶಿವಮೊಗ್ಗ: ನಗರದ ವ್ಯಕ್ತಿಯೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಬರೋಬ್ಬರಿ 19.23 ಲಕ್ಷ ರೂ. ಆನ್‌ಲೈನ್ ಮೂಲಕ ವಂಚಿಸಲಾಗಿದೆ.
ಕೆಎಸ್‌ಎಲ್ ವಿಐಪಿ ವ್ಯಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪರಿಚಿತವಾಗಿದ್ದ ವ್ಯಕ್ತಿಗೆ ವಂಚಕ ಷೇರು ಮಾರುಕಟ್ಟೆಯಲ್ಲಿ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ಸಿಗುವುದಾಗಿ ಹೇಳಿದ್ದ. ಆತನ ಮಾತು ನಂಬಿದ್ದ ವ್ಯಕ್ತಿಗೆ ಆರಂಭದಲ್ಲಿ ಲಾಭಾಂಶದ ರೂಪದಲ್ಲಿ 1,30,933 ರೂ. ವಾಪಸ್ ನೀಡಿದ್ದ.
ಇನ್ನುಳಿದ ಅಸಲು ಮತ್ತು ಲಾಭಾಂಶದ ಹಣ ನೀಡಲು ಲೋನ್, ಕಮೀಷನ್ ಮತ್ತಯ ಟ್ಯಾಕ್ಸ್ ಇತರೆ ವೆಚ್ಚಗಳನ್ನು ಭರಿಸಬೇಕು ಎಂದು ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ 19.23 ಲಕ್ಷ ರೂ. ಹಾಕಿಸಿಕೊಂಡಿದ್ದ. ಲಾಭಾಂಶದ ಜತೆಗೆ ಹಾಕಿದ್ದ ಬಂಡವಾಳವೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡು ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಬಗ್ಗೆ ವಂಚನೆಗೆ ಒಳಗಾದ ವ್ಯಕ್ತಿಯು ಶಿವಮೊಗ್ಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.