

ಮೈಸೂರು: ನಗರದ ಸೈಂಟಿಫಿಕ್ ಪ್ರಾಣಾಯಾಮ ಫೌಂಡೇಷನ್ ಟ್ರಸ್ಟ್ ವತಿಯಿಂದ ಯೋಗ ಪ್ರಾಣೋತ್ಸವ ಹಾಗೂ ರಾಜ್ಯಮಟ್ಟದ ಯೋಗ ಪ್ರಾಣಾಯಾಮ ವಿಚಾರ ಸಂಕಿರಣವನ್ನು ಜೂ.19 ಮತ್ತು 20ರಂದು ಮೇಟಗಳ್ಳಿಯ ಜಿಎಸ್‌ಎಸ್‌ಎಸ್ ಮಹಿಳಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಜೂ.19ರಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬೆಂಗಳೂರಿನ ನ್ಯೂರೋ ಸರ್ಜನ್ ಡಾ.ರಾಜಶೇಖರ್ ರೆಡ್ಡಿ, ಸ್ಕಾೃಡ್ರನ್ ಲೀಡರ್ ಪರಿಧಿ ಸಿಂಗ್ ಕಾರ್ತಿಕ್, ಭಾರತೀಯ ಯೋಗ ಅಸೋಸಿಯೇಷನ್ ಕಾರ್ಯದರ್ಶಿ ಎ.ಸುಬ್ರಹ್ಮಣಿಯನ್, ಜಿಎಸ್‌ಎಸ್‌ಎಸ್ ಪ್ರಾಂಶುಪಾಲ ಶಿವಕುಮಾರ್ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಟ್ರಸ್ಟ್ ಸಂಸ್ಥಾಪಕಿ ದೇವಕಿ ಮಾಧವ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮಾನವ ಕಲ್ಯಾಣಕ್ಕಾಗಿ ಯೋಗ’ ಎಂಬುದು ಇಲ್ಲಿನ ಪ್ರಮುಖ ವಿಷಯವಾಗಿದೆ. ಅಂದಾಜು 40 ಜನ ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ. ಆಸಕ್ತರಿಗೆ ಪ್ರವೇಶ ಉಚಿತವಾಗಿದೆ ಎಂದು ಮಾಹಿತಿ ನೀಡಿದರು.
ಜೂ.20ರ ಬೆಳಗ್ಗೆ 9.30ಕ್ಕೆ ಸಮಾರೋಪ ನಡೆಯಲಿದೆ. ರಾಮಕೃಷ್ಣ ಆಶ್ರಮದ ಸ್ವಾಮಿ ಮಹಾಮೇಧಾನಂದಜಿ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದರು. ಟ್ರಸ್ಟ್ ಕಾರ್ಯದರ್ಶಿ ಸೀತಾ ರಮೇಶ್, ಸದಸ್ಯ ಮಾಧವ ಸದಾಶಿವ ಇದ್ದರು.