

ಚಿಂತಾಮಣಿ: ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ಜ.18 ರಂದು ಮತದಾನ ನಡೆಯಲಿದ್ದು ಈವರೆಗೆ ಒಟ್ಟು 30 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್ ಎಸ್.ಎಲ್.ವಿಶ್ವನಾಥ್ ತಿಳಿಸಿದರು.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರ ಎ ಮತ್ತು ಬಿ ತರಗತಿಗಳಿಗೆ ಸೇರಿ ಒಟ್ಟು 14 ನಿರ್ದೇಶಕ ಸ್ಥಾನಕ್ಕೆ ಒಟ್ಟು 30 ನಾಮಪತ್ರಗಳು ಸಲ್ಲಿಕೆಯಾಗಿವೆ. ಸಂಘದ ಎ ತರಗತಿಯಿಂದ ಆಯ್ಕೆಯಾಗುವ 4 ನಿರ್ದೇಶಕರ ಸ್ಥಾನದ ಚುನಾವಣೆಗೆ ಒಟ್ಟು 5 ನಾಮಪತ್ರ ಸಲ್ಲಿಕೆಯಾಗಿದ್ದು ಅದರಲ್ಲಿ ತಾಲೂಕಿನ ಟಿ.ಗೊಲ್ಲಹಳ್ಳಿ ವಿವಿಎಸ್‌ಎನ್ ಪ್ರತಿನಿಧಿಯಾಗಿ ನರಸಿಂಹರೆಡ್ಡಿ, ಬೊಮ್ಮೆಪಲ್ಲಿಯಿಂದ ನಾರಾಯಣಸ್ವಾಮಿ, ಕಲ್ಲಹಳ್ಳಿಯಿಂದ ಎನ್.ಎಂ.ಸೊಣ್ಣಪ್ಪ ಮತ್ತು ನಂದಿಗಾನಹಳ್ಳಿಯಿಂದ ಸೀನಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಬಿ ತರಗತಿಯಿಂದ 10 ನಿರ್ದೇಶಕರ ಸ್ಥಾನಕ್ಕೆ 25 ನಾಮಪತ್ರ ಸಲ್ಲಿಕೆಯಾಗಿದ್ದು, ಅದರಲ್ಲಿ ಸಾಮಾನ್ಯ ಕ್ಷೇತ್ರದ 4 ಸ್ಥಾನಗಳಿಗೆ ಮಾದಮಂಗಲದ ಎಂ.ಜಿ.ಚಂದ್ರಪ್ಪ, ಸುಬ್ಬರಾಯನಪೇಟೆಯ ಎಸ್.ಎಂ.ಮಂಜುನಾಥ್, ರಾಗುಟ್ಟಹಳ್ಳಿಯ ಬಿ.ಎಂ.ನಾಗರತ್ನಮ್ಮ, ಮುದ್ದಲಹಳ್ಳಿಯ ಎಂ.ಎನ್.ಶ್ರೀರಾಮರೆಡ್ಡಿ, ಕೈವಾರದ ಎನ್.ಮಂಜುನಾಥರೆಡ್ಡಿ, ರಾಗುಟ್ಟಹಳ್ಳಿಯ ಅರ್.ಜಯರಾಂ, ಕುರುಬೂರು ಕೆ.ಆರ್.ನಂಜುಂಡಗೌಡ, ಲಕ್ಷ್ಮೀದೇವಕೋಟೆ ಎನ್.ನಾಗೇಶ್, ನಗರದ ವೆಂಕಟಗಿರಿಕೋಟೆ ಬಡಾವಣೆಯ ಆರ್.ನವೀನ್, ನರಸಾಪುರದ ಎನ್.ಎಲ್.ಶ್ರೀನಿವಾಸರೆಡ್ಡಿ ಮತ್ತು ಏನಿಗದೆಲೆಯ ವೈ.ಎನ್.ರಮೇಶ್‌ರೆಡ್ಡಿ ಸೇರಿ 11 ಜನ ನಾಮಪತ್ರ ಸಲ್ಲಿಸಿದ್ದಾರೆ.
ಪರಿಶಿಷ್ಟ ಜಾತಿಯ 1 ಸ್ಥಾನಕ್ಕೆ ಬ್ರಾಹ್ಮಣಹಳ್ಳಿಯ ಎನ್.ವೀಣಾ ಮತ್ತು ಹಾದಿಗೆರೆಯ ಎಚ್.ಎನ್.ವಂಶಿಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ. ಪರಿಶಿಷ್ಟ ಪಂಗಡದ 1 ಸ್ಥಾನಕ್ಕೆ ಭಕ್ತರಹಳ್ಳಿಯ ಬಿ.ಎನ್.ವೆಂಕಟೇಶಪ್ಪ, ಕುರುಮಾರ‌್ಲಹಳ್ಳಿಯ ಶ್ರೀನಿವಾಸ್ ಮತ್ತು ಕುರುಬೂರಿನ ಕೆ.ಎನ್.ಲಕ್ಷ್ಮೀನರಸಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ವರ್ಗದ ಎ 2 ಸ್ಥಾನಗಳಿಗೆ ಕೊಂಡ್ಲಿಗಾನಹಳ್ಳಿಯ ಕೆ.ಎಂ.ನಾಗರಾಜ್ ಮೈಲಾಂಡ್ಲಹಳ್ಳಿಯ ಮುದಾಸೀರ್ ನಜರ್, ಕೆಂಚಾರ‌್ಲಹಳ್ಳಿಯ ಜೆ.ಭಾಸ್ಕರ್, ಹುಲ್ಲುಗುಮ್ಮನ ಹಳ್ಳಿಯ ಬಾಲರಾಜು ಮತ್ತು ಸೀಕಲ್ಲು ಎಂ.ವೆಂಕಟೇಶಪ್ಪ ಸೇರಿ ಒಟ್ಟು 5 ಮತ್ತು ಮಹಿಳಾ ಮೀಸಲು ಕ್ಷೇತ್ರದ 2 ಸ್ಥಾನಗಳಿಗೆ ಗುಂದಿಗೆರೆ ಗ್ರಾಮದ ಪ್ರತಿಮಾ, ಬೈನಹಳ್ಳಿಯ ಕೆ.ವಿ.ನೇತ್ರಾ, ಕೈವಾರದ ವಿಮಲಾ, ಕೈವಾರದ ಉಮಾದೇವಿ ಸೇರಿ ಒಟ್ಟು 4 ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿಯಾದ ಚಿಕ್ಕಬಳ್ಳಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯ ನಿಬಂಧಕರಾದ ಸಲ್ಮಾಫಿರ್ಧೋಸ್, ತಾಲೂಕು ಕಚೇರಿಯ ಚುನಾವಣಾ ಶಿರಸ್ತೆದಾರ ಮುಜಾಮಿಲ್, ಕಾರ್ಯದರ್ಶಿ ವೆಂಕಟೇಶ್ ಇತರರಿದ್ದರು.