18ಕ್ಕೆ ರಾಮಕೃಷ್ಣ ಪರಮಹಂಸ ಜಾತ್ರಾ ಮಹೋತ್ಸವ

ramakrishna Paramahamsa
Published on

ಮೈಸೂರು

ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದ ವತಿಯಿಂದ ರಾಮಕೃಷ್ಣ ಪರಮಹಂಸ ಜಾತ್ರಾ ಮಹೋತ್ಸವ ಫೆ.18ರಂದು ರಾಮಕೃಷ್ಣಪರಮಹಂಸ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಹೋತ್ಸವದಲ್ಲಿ ಸಂಜೆ 5ಕ್ಕೆ ಯೋಗಪ್ರದರ್ಶನ, ಸ್ವಾಮೀಜಿಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಸಾನ್ನಿಧ್ಯ ವಹಿಸುವರು. ವಾಗ್ಮಿ ಹೀರೆಮಗಳೂರು ಕಣ್ಣನ್, ಚಕ್ರವರ್ತಿ ಸೂಲಿಬೆಲೆ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕ ಎಂ.ಕೆ.ಯಶವಂತ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಷ್ಠಾನ ಕಾರ್ಯಾಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ಉತ್ಸವದ ಪ್ರಯುಕ್ತ ಫೆ.18ರವರೆಗೆ ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಲಾಗಿದೆ ಎಂದರು.

ಪ್ರತಿಷ್ಠಾನದ ಪದಾಧಿಕಾರಿಗಳಾದ ಡಿ.ಮಾದೇಗೌಡ, ಕೆಂಪಲಿಂಗರಾಜು, ಎಚ್.ಜೆ.ಬಸವಲಿಂಗಪ್ಪ, ಎಂ.ಬಸವಣ್ಣ, ಎಸ್.ಪುರುಷೋತ್ತಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net