18ಕ್ಕೆ ದುರ್ಗದಲ್ಲಿ ಭೋವಿ ಜನೋತ್ಸವ

CTD .....3
Published on


ಚಿತ್ರದುರ್ಗ: ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಜುಲೈ 18ರಂದು ರಾಜ್ಯಮಟ್ಟದ ಬೃಹತ್‌ಭೋವಿ ಜನೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗುವುದು ಎಂದು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಬೆಂಗಳೂರು ಜಸ್ಮಾ ಭವನದಲ್ಲಿ ಗುರುವಾರ ಹಮ್ಮಿಕೊಂಡ್ದಿ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ಸಂಘಟನೆ ದೃಷ್ಟಿಯಿಂದ ಅದ್ದೂರಿಯಾಗಿ ನಡೆಸಬೇಕು. ನೂತನ ಸಂಸದರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಯುಪಿಎಸ್‌ಸಿ ಸಾಧಕರನ್ನು ಗೌರವಿಸಲಾಗುವುದು ಎಂದರು.
ಸಂಘಟಿತ ಸಮಾಜಗಳು ಎಲ್ಲ ಕ್ಷೇತ್ರಗಳಲ್ಲೂ ಮುಖ್ಯವಾಹಿನಿಗೆ ಬಂದಿವೆ. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಆದ್ಯತೆ ನೀಡಬೇಕು. ಎಲ್ಲ ರಂಗಗಳ ಸಾಧಕರನ್ನು ಗುರುತಿಸುವ, ಪ್ರೋತ್ಸಾಹಿಸುವ ಕಾರ‌್ಯವನ್ನು ಗುರುಪೀಠ ನಿರ್ವಹಿಸುತ್ತಿದೆ. ಸಮಾಜದ ಭೂತ, ವರ್ತಮಾನ, ಭವಿಷ್ಯ ದಿಕ್ಸೂಚಿ ಮಹಾಸಂಗಮವೇ ಭೋವಿ ಜನೋತ್ಸವ ಸಮಾರಂಭವಾಗಿದೆ ಎಂದು ತಿಳಿಸಿದರು.
ಸಚಿವ ತಂಗಡಗಿ ಅವರು ಮಾತನಾಡಿ, ಭೋವಿ ಸಮಾಜದ ಸಂಘಟನೆ ಬಹು ಕಷ್ಟದ ಕೆಲಸವಾಗಿದ್ದು, ಶ್ರೀಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಸಮಾಜವನ್ನು ಸಂಘಟಿಸಿದ್ದರಿಂದಾಗಿ ನಾನಿಂದು ಮಂತ್ರಿಯಾಗಿದ್ದೇನೆ ಎಂದರು.
ಭೋವಿ ನಿಗಮ ಸ್ಥಾವನೆಯಾಗಿದೆ, ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ನಿಗಮ ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರ ನೇಮಕವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಗೌರವಿಸುವ ಶ್ರೀಗಳ ಸಾಲಿನಲ್ಲಿ ನಮ್ಮ ಸಮುದಾಯದ ಮಠಾಧೀಶರು ಇರುವುದು ನಮಗೆ ಹೆಮ್ಮೆ ಎಂದು ಹೇಳಿದರು.
ಕೆಪಿಎಸ್‌ಸಿ ಸದಸ್ಯರ ನೇಮಕವಾಗುತ್ತಿದೆ. ಶ್ರೀಗಳ ಬದ್ಧತೆಯಿಂದಾಗಿ ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕವಾಗಿ ಬಲಗೊಳ್ಳುತ್ತಿದೆ. ಪ್ರತಿಭಾ ಪುರಸ್ಕಾರ, ಗೌರವ ಪುರಸ್ಕಾರ ಸೇರಿ ನಾನಾ ಕಾರ‌್ಯಕ್ರಮಗಳೊಂದಿಗೆ ಜನೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಕೋರಿದರು.
ವಕೀಲ ಶಂಕರಪ್ಪ, ನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್, ಮುಖಂಡರಾದ ತಿಪ್ಪಣ್ಣ, ರವಿಪೂಜಾರ್ ಮತ್ತಿತರರು ಮಾತನಾಡಿದರು. ಸಮಾಜದ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಮುಖಂಡರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

*ಕೋಟ್
ಸಮಾಜದ ಪ್ರಗತಿಗೆ ಶ್ರಮಿಸುವುದು ನಮ್ಮ ಕರ್ತವ್ಯವಾಗಿದ್ದು, ತುರ್ತಾಗಿ ಸಮಾಜದ ಸಂಘಟನೆಯಾಬೇಕಿದೆ. ಸಾಧ್ಯವಾದರೆ ಬೆಂಗಳೂರು ಅರಮನೆ ಆವರಣದಲ್ಲಿ ಕಾರ‌್ಯಕ್ರಮ ನಡೆಸಬೇಕು.
ಎಸ್.ರವಿಕುಮಾರ್, ಅಧ್ಯಕ್ಷರು, ಭೋವಿ ಅಭಿವೃದ್ಧಿ ನಿಗಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net