

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಹಾಗೂ ಸರ್ಕಾರಿ ಪ್ರೌಢಶಾಲೆ ನೆಲ್ಲಿಕಾರು ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ಆಳ್ವಾಸ್ ಶಾಲೆ ಕ್ರೀಡಾಪಟುಗಳು 62 ಚಿನ್ನ, 53 ಬೆಳ್ಳಿ ಮತ್ತು 29 ಕಂಚಿನ ಪದಕಗಳೊಂದಿಗೆ 143 ಪದಕಗಳನ್ನು ಗಳಿಸಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
ಪ್ರಾಥಮಿಕ ಶಾಲೆಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿ, ಪ್ರೌಢಶಾಲಾ 14 ವರ್ಷ ವಯೋಮಿತಿಯ ಬಾಲಕ-ಬಾಲಕಿಯರ ತಂಡ ಪ್ರಶಸ್ತಿ ಹಾಗೂ ಪ್ರೌಢಶಾಲಾ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿಯೊಂದಿಗೆ ಕ್ರೀಡಾಕೂಟದಲ್ಲಿ ಸತತವಾಗಿ 18ನೇ ಬಾರಿ ಆಳ್ವಾಸ್ ಶಾಲೆ ಸಮಗ್ರ ಪ್ರಶಸ್ತಿ ಪಡೆದಿದೆ.
ಮೂಡುಬಿದಿರೆ ತಾಲೂಕು ಗಳಿಸಿದ ಒಟ್ಟು 143 ಪದಕಗಳು ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು ಪಡೆದ ಪದಕಗಳಾಗಿವೆ. ಸಾಧಕ ಕ್ರೀಡಾಪಟುಗಳನ್ನು ಆಳ್ವಾಸ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.
ಪ್ರಾಥಮಿಕ ಶಾಲಾ ವೈಯಕ್ತಿಕ ಚಾಂಪಿಯನ್: ಬಾಲಕರ ವಿಭಾಗ- ಸುಭಾಷ್ ಎ.ಆರ್., ಬಾಲಕಿಯರ ವಿಭಾಗ- ರಕ್ಷಿತಾ ಮತ್ತಪ್ಪ, ದೀಪಾ ನಿಂಗಪ್ಪ.
ಪ್ರೌಢಶಾಲಾ 14ವರ್ಷ ವಯೋಮಿತಿ ವೈಯಕ್ತಿಕ ಚಾಂಪಿಯನ್: ಬಾಲಕರ ವಿಭಾಗ- ಕೌಶಿಕ್ ಪಿ.ಶೆಟ್ಟಿಗಾರ್, ಬಾಲಕಿಯರ ವಿಭಾಗ- ಮೇಘಾ ಅಶೋಕ್ ಪೂಜಾರಿ, ಅಮೂಲ್ಯ ಬಿ.
ಪ್ರೌಢಶಾಲಾ 17ವರ್ಷ ವಯೋಮಿತಿ ವೈಯಕ್ತಿಕ ಚಾಂಪಿಯನ್: ಬಾಲಕರ ವಿಭಾಗ- ಸಮರ್ಥ್ ಸಂಜೀವ ಕುಮಾರ್, ಬಾಲಕಿಯರ ವಿಭಾಗ- ಪೂಜಾ.