ಬ್ಯಾಡಗಿ ಮಾರುಕಟ್ಟೆಯಲ್ಲಿ 1,84,219 ಮೆಣಸಿನಕಾಯಿ ಚೀಲ ಆವಕ

BYD CHILLY
Published on

ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರದ ಟೆಂಡರ್​ನಲ್ಲಿ 1,84,219 ಚೀಲಗಳು ಆವಕವಾಗಿದ್ದು, ಮೆಣಸಿನಕಾಯಿ ಆವಕ ವಾರದಿಂದ ವಾರಕ್ಕೆ ತೀವ್ರ ಏರಿಕೆ ಕಂಡಿದ್ದು, ಭರ್ಜರಿ ವ್ಯಾಪಾರ ನಡೆದಿದೆ.

ಕಳೆದ ನಾಲ್ಕು ವಾರಗಳಿಂದ ಮೆಣಸಿನಕಾಯಿ ಆವಕದಲ್ಲಿ ಏರಿಕೆಯಾಗಿದ್ದು, ಪ್ರತಿ ಸೋಮವಾರ ಒಂದರಿಂದ ಒಂದೂವರೆ ಲಕ್ಷ ಚೀಲ ಟೆಂಡರ್​ನಲ್ಲಿ ಮಾರಾಟವಾಗುತ್ತಿದೆ. ಸೋಮವಾರ (ಫೆ. 3) ಒಂದೇ ದಿನ ಸುಮಾರು 20 ಲಕ್ಷಕ್ಕೂ ಅಧಿಕ ಮಾರುಕಟ್ಟೆ ಶುಲ್ಕ ಜಮೆಯಾಗಿದೆ.

ಸತತವಾಗಿ ಐದನೇ ಸೋಮವಾರವೂ ಲಕ್ಷ ಚೀಲ ದಾಟುವ ಮೂಲಕ ಮಾರುಕಟ್ಟೆ ಭರ್ಜರಿ ವ್ಯವಹಾರದಲ್ಲಿ ತೊಡಗಿದೆ. ಪರಿಣಾಮ ರೈತರಿಗೆ ಗುಣಮಟ್ಟದ ಬೆಲೆ ಸಿಗುತ್ತಿದೆ. ಕಡ್ಡಿಕಾಯಿಗೆ ಅತಿಹೆಚ್ಚು 33 ಸಾವಿರ ರೂ., ಡಬ್ಬಿಕಾಯಿಗೆ ಅತಿಹೆಚ್ಚು 35 ಸಾ.ರೂ. ಬೆಲೆಗೆ ಮಾರಾಟವಾಗಿವೆ.

ಸೋಮವಾರದ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿ ತಳಿ ಮೆಣಸಿನಕಾಯಿ 2809-33009 ಸಾ.ರೂ. ಬೆಲೆಯಲ್ಲಿ ಮಾರಿದ್ದು, ಸರಾಸರಿ 28209 ಸಾ.ರೂ ಇದೆ. ಡಬ್ಬಿತಳಿ 3169-35599 ಸಾ.ರೂ. ಬೆಲೆಯಿದ್ದು, ಸರಾಸರಿ 29650 ಸಾ.ರೂ. ಹಾಗೂ ಗುಂಟೂರು ಕಾಯಿ 1029-16409 ಸಾ.ರೂ, ಸರಾಸರಿ 14200 ಸಾ.ರೂ. ಬೆಲೆಯಲ್ಲಿ ಮಾರಾಟವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net