ಗರಗ ಗ್ರಾಮದಲ್ಲಿ 184 ಪಿಒಪಿ ಗಣಪತಿ ವಿಗ್ರಹಗಳ ವಶ

IMG-20250623-WA0018
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಾರ್ವಜನಿಕ ದೂರಿನ ಮೇರೆಗೆ ವಿವಿಧ ಇಲಾಖೆ ಅಧಿಕಾರಿಗಳಿರುವ ಪಿಒಪಿ ಪತ್ತೆ ಕಾರ್ಯಪಡೆ ಗರಗ ಗ್ರಾಮದಲ್ಲಿ ಸೋಮವಾರ ರಾತ್ರಿ ದಿಢೀರ್ ದಾಳಿ ಮಾಡಿ, 184 ಪಿಒಪಿ ಗಣಪತಿ ವಿಗ್ರಹಗಳನ್ನು ವಶಕ್ಕೆ ಪಡೆದಿದೆ. ನಿಷೇಧಿತ ಪಿಒಪಿ ಗಣೇಶ ವಿಗ್ರಹಗಳ ದಾಸ್ತಾನು ಹೊಂದಿದ್ದ ಮಾಲೀಕನ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆ ಆದೇಶದ ಅನುಸಾರ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಽಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಚಿತ ಮಾಹಿತಿಯ ಮೇರೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ, ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಅಧಿಕಾರಿಗಳ ಕಾರ್ಯಪಡೆಗೆ ದಿಢೀರ್ ದಾಳಿ ಮಾಡಲು ಸೂಚಿಸಲಾಗಿತ್ತು. ಗರಗ ಗ್ರಾಮದ ವಿನಾಯಕ ಕಾಳಪ್ಪ ಪತ್ತಾರ ಮಾಲೀಕತ್ವದಲ್ಲಿ ದೊಡ್ಡ ಮತ್ತು ಸಣ್ಣ ಪ್ರಮಾಣದ ಸುಮಾರು 184 ಪಿಒಪಿ ವಿಗ್ರಹಗಳನ್ನು ದಾಸ್ತಾನು ಮಾಡಲಾಗಿತ್ತು. ಅವುಗಳಿಗೆ ರಾಸಾಯನಿಕ ಮಿಶ್ರಿತ ಬಣ್ಣ ಮಾಡುವ ಕಾರ್ಯ ಮಾಡಲಾಗುತಿತ್ತು. ಒಂದು ಕಡೆ 75 ವಿಗ್ರಹಗಳು ಮತ್ತೊಂದೆಡೆ 109 ವಿಗ್ರಹಗಳು ದೊರೆತಿದ್ದು, ವಶಕ್ಕೆ ಪಡೆಯಲಾಗಿದೆ. ಆರೋಪಿ ವಿನಾಯಕ ಪತ್ತಾರ ಪಿಒಪಿ ವಿಗ್ರಹಗಳ ಸಗಟು ಮತ್ತು ಬಿಡಿ ಮಾರಾಟಗಾರ ಎಂಬುದು ತಿಳಿದುಬಂದಿದೆ ಎಂದರು.

ಪಿಒಪಿ ವಿಗ್ರಹಗಳನ್ನು ಕೊಲ್ಲಾಪುರದಿಂದ ತರಲಾಗಿತ್ತು ಎಂದು ಆರೋಪಿ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ. ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಲಾಗಿದೆ ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಹಿರಿಯ ಅಧಿಕಾರಿ ಜಗದೀಶ ಐ.ಎಚ್., ಗರಗ ಪಿಡಿಒ ಶಶಿಧರ ಗಂಧದ, ಪಾಲಿಕೆ ಕಂದಾಯ ಅಽಕಾರಿ ಗಂಗಾಧರ ಮನಕಟ್ಟಿಮಠ, ಗರಗ ಪಿಎಸ್ ಐ ಸಿದ್ರಾಮ ಉನ್ನದ, ಗ್ರಾಮ ಆಡಳಿತ ಅಽಕಾರಿ ಮಹೇಶ ನಾಗವ್ವನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net