18 ರಂದು ಮಹಿಳಾ ಉದ್ಯೋಗ ಮೇಳ

Published on

ಮೈಸೂರು: ಎಜುಕೇರ್ ಐಟಿಇಎಸ್‌ಯಿಂದ ನ.18 ರಂದು ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಒಂದು ದಿನದ ಮಹಿಳಾ ಉದ್ಯೋಗ ಮೇಳ ಮತ್ತು ಮಹಿಳೆಯರೇ ತಯಾರಿಸಿದ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ರಚನಾ ಮಹೇಶ್ ತಿಳಿಸಿದರು.
18 ರಿಂದ 50 ವರ್ಷದೊಳಗಿನ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಮೊದಲಾದ ವಿದ್ಯಾರ್ಹತೆ ಹೊಂದಿದವರು ಈ ಮೇಳದಲ್ಲಿ ಭಾಗವಹಿಸಬಹುದು. ಕೆಲವೊಂದು ಕಂಪನಿಗಳು ವಿದ್ಯಾರ್ಹತೆಯಿಲ್ಲದಿದ್ದರೂ ಟೈಪಿಂಗ್ ಹಾಗೂ ಕಂಪ್ಯೂಟರ್ ಜ್ಞಾನವಿರುವವರನ್ನು ನೇಮಕ ಮಾಡಿಕೊಳ್ಳಲಿವೆ ಎಂದು ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.
ಮೇಳದ ಜತೆಗೆ ವಸ್ತುಪ್ರದರ್ಶನದಲ್ಲಿ ಮಹಿಳೆಯರೇ ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಬಹುದಾಗಿದೆ. ಮಾಹಿತಿಗೆ ದೂ. 6364340027ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಆಯೋಜಕರಾದ ಸೋಮಣ್ಣ, ಡಾ.ನಿರಂಜನಬಾಬು, ಪ್ರತಿಭಾ ಗುರುರಾಜ್, ಶೋಭಾ ನಂದಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net