

ಚಿತ್ರದುರ್ಗ: ಐತಿಹಾಸಿಕ ಕೋಟೆ ಆವರಣದಲ್ಲಿರುವ ಬನಶಂಕರಿ ದೇವಿ ದೇಗುಲದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಜೂ.18ರಂದು ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಮುಂಜಾನೆ 4ಕ್ಕೆ ಅಭಿಷೇಕ, ಬೆಳಗ್ಗೆ 8.30ಕ್ಕೆ ಹೋಮ ನೆರವೇರಲಿದೆ. ಭಕ್ತರಿಗಾಗಿ ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ಆಷಾಢ ಮಾಸ ಆರಂಭವಾಗುತ್ತಿದ್ದು, ಅದರ ಭಾಗವಾಗಿಯೂ ಈ ಪೂಜಾ ಕೈಂಕರ್ಯ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ದೇಗುಲದ ಅರ್ಚಕ ಕ್ಯಾತಣ್ಣ, ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಕೋರಿದ್ದಾರೆ.
*ದೇವಿ ದೇಗುಲಗಳಲ್ಲಿ ವಿಶೇಷ ಪೂಜೆ:
ಆಷಾಢ ಮಾಸ ಆರಂಭದ ಹಿನ್ನೆಲೆಯಲ್ಲಿ ಏಕನಾಥೇಶ್ವರಿ, ಕಣಿವೆ ಮಾರಮ್ಮ, ತಿಪ್ಪಿನಘಟ್ಟಮ್ಮ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ ಸೇರಿ ಶಕ್ತಿದೇವತೆಗಳ ದೇಗುಲಗಳಲ್ಲಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ, ಅಲಂಕಾರ ಸೇವೆ ಜರುಗಲಿದೆ ಎಂದು ದೇಗುಲಗಳ ಅರ್ಚಕರು ತಿಳಿಸಿದ್ದಾರೆ.