

ಶೃಂಗೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 74ನೇ ಜನ್ಮದಿನದ ಪ್ರಯುಕ್ತ ಸೇವಾಪಾಕ್ಷಿಕ ಅಭಿಯಾನದಡಿ ಬಿಜೆಪಿ ಮಂಡಲದಿಂದ ಭಾನುವಾರ ಶ್ರೀ ಅಭಿನವವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಡಾ. ಲಕ್ಷ್ಮೀನಾರಾಯಣ್ ಮಾತನಾಡಿ, ರಕ್ತ ದಾನ ಪವಿತ್ರವಾದುದು. ರಕ್ತ ದಾನದಿಂದ ರಕ್ತದಲ್ಲಿ ಹೆಚ್ಚುವರಿ ಕೊಬ್ಬಿನ ಮಟ್ಟ ಕಡಿಮೆಯಾಗುತ್ತದೆ. ಆರೋಗ್ಯವಂತರು ನಾಲ್ಕು ಅಥವಾ ಆರು ತಿಂಗಳಿಗೊಮ್ಮೆ ರಕ್ತ ದಾನ ಮಾಡಬಹುದು ಎಂದರು. ಸುಮಾರು 18 ಯೂನಿಟ್ ರಕ್ತವನ್ನು ಯುವಮೋರ್ಚಾದ ಪದಾಧಿಕಾರಿಗಳು ನೀಡಿದರು. ಎಸ್ಸಿ ಸಿ ಮೋರ್ಚಾ ರಾಜ್ಯ ವಕ್ತಾರ ಬಿ.ಶಿವಶಂಕರ್ 58ನೇಬಾರಿ ರಕ್ತ ದಾನ ಮಾಡಿದರು. ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್ ಸಂಪೆಕೊಳಲು, ಪ್ರಧಾನ ಕಾರ್ಯದರ್ಶಿ ವಿಕಾಸ್ ಹಾಲ್ಮಕ್ಕಿ, ಬಿಜೆಪಿ ಮಂಡಲ ಕಾರ್ಯದರ್ಶಿ ಸಚಿನ್ ಗುಬ್ಬಗೋಡು, ಮನು ಕೊಚ್ಚವಳ್ಳಿ, ಶ್ರೇಯಸ್ಸು ಕವಿಲುಕೊಡಿಗೆ ಇದ್ದರು.